Publish Date: Fri, 08 May 2020 (10:02 IST)
Updated Date: Fri, 08 May 2020 (10:06 IST)
ಮುಂಬೈ: ಇಂದು ಬೆಳಗಿನ ಜಾವ ಮಹಾರಾಷ್ಟ್ರದ ಔರಂಗದಾಬಾದ್ ಬಳಿ ನಡೆದ ಗೂಡ್ಸ್ ರೈಲು ಡಿಕ್ಕಿ ಪ್ರಕರಣದಲ್ಲಿ ಸಾವನ್ನಪ್ಪಿದ ವಲಸಿಗರೆಲ್ಲರೂ ಮಧ್ಯಪ್ರದೇಶಕ್ಕೆ ಸೇರಿದವರು ಎನ್ನಲಾಗಿದೆ.
ಇಂದು ನಸುಕಿನಲ್ಲಿ ನಡೆದ ದುರಂತದಲ್ಲಿ ಸಾವನ್ನಪ್ಪಿದ ವಲಸಿಗರು ತಮ್ಮ ತವರಿಗೆ ತೆರಳಲು ಅಣಿಯಾಗಿದ್ದರು. ರೈಲು ಹಳಿಗಳ ಮೇಲೆ ಕೂತಿದ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಘಟನೆ ನಡೆದಾಗ ಇವರೆಲ್ಲರೂ ರೈಲು ಹಳಿಗಳ ಮೇಲೆ ಮಲಗಿ ನಿದ್ರೆ ಹೋಗಿದ್ದರು. ಹೀಗಾಗಿ ರೈಲು ಬರುವುದನ್ನು ಗುರುತಿಸಿರಲಿಲ್ಲ. ರೈಲು ಚಾಲಕನಿಗೂ ಕೊನೆಯ ಕ್ಷಣದಲ್ಲಿ ರೈಲು ನಿಲ್ಲಿಸಲು ಸಾಧ‍್ಯವಾಗದೇ ದುರಂತ ಸಂಭವಿಸಿದೆ.