Publish Date: Thu, 16 Apr 2020 (10:40 IST)
Updated Date: Thu, 16 Apr 2020 (10:42 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಊರಿಗೆ ತೆರಳಲೂ ಆಗದೇ ರಾಜ್ಯ ರಾಜಧಾನಿಯಲ್ಲಿ ಅತಂತ್ರವಾಗಿ ದಿನ ಕಳೆಯುತ್ತಿರುವ ವಲಸಿಗರ ರಕ್ಷಣೆಗೆ ಬಿಬಿಎಂಪಿ ಮುಂದಾಗಿದೆ.
ವಲಸಿಗರಿಗೆ ಸ್ಥಳೀಯ ಕಲ್ಯಾಣ ಮಂಟಪ, ಹಾಲ್ ಗಳಲ್ಲಿ ವಸತಿ ವ್ಯವಸ್ಥೆ ಮಾಡಿ ತಾತ್ಕಾಲಿಕವಾಗಿ ರಿಲೀಫ್ ನೀಡಲು ಬಿಬಿಎಂಪಿ ಮುಂದಾಗಿದೆ.
ಈಗಾಗಲೇ ಇದ್ದ ಕೆಲಸವನ್ನೂ ಕಳೆದುಕೊಂಡು ಹಲವರ ಬದುಕು ಬೀದಿ ಪಾಲಾಗಿದೆ. ಇಂತಹವರ ಕರುಣಾಜನಕ ಕತೆಗಳು ದಿನೇ ದಿನೇ ವರದಿಯಾಗುತ್ತಲೇ ಇವೆ. ಹೀಗಾಗಿ ತಾತ್ಕಾಲಿಕವಾಗಿ ಇವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಮುಂದಾಗಿದೆ.