Publish Date: Fri, 08 May 2020 (09:31 IST)
Updated Date: Fri, 08 May 2020 (09:34 IST)
ಮುಂಬೈ: ಕೊರೋನಾ ಆಯ್ತು.. ವಿಶಾಖಪಟ್ಟಣ ಅನಿಲ್ ದುರಂತವಾಯ್ತು.. ಇದರ ಬೆನ್ನಲ್ಲೇ ಈಗ ದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ರೈಲು ಅಪಘಾತದಲ್ಲಿ 15 ವಲಸಿಗರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದ ಔರಂಗದಾಬಾದ್ ಬಳಿ ಗೂಡ್ಸ್ ರೈಲು ಡಿಕ್ಕಿ ಹೊಡೆದು 15 ವಲಸಿಗರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ.
ಇಂದು ಮುಂಜಾನೆ 5.15 ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.