Select Your Language

Notifications

webdunia
webdunia
webdunia
webdunia

ಹಳಿ ಮೇಲೆ ವಲಸಿಗರನ್ನು ಕಂಡು ರೈಲು ನಿಲ್ಲಿಸಲು ಯತ್ನಿಸಿದ್ದ ಚಾಲಕ

ಹಳಿ ಮೇಲೆ ವಲಸಿಗರನ್ನು ಕಂಡು ರೈಲು ನಿಲ್ಲಿಸಲು ಯತ್ನಿಸಿದ್ದ ಚಾಲಕ
ಮುಂಬೈ , ಶುಕ್ರವಾರ, 8 ಮೇ 2020 (09:40 IST)
ಮುಂಬೈ: ಮಹಾರಾಷ್ಟ್ರದ ಔರಂಗದಾಬಾದ್ ಬಳಿ ನಡೆದ ಗೂಡ್ಸ್ ರೈಲು ದುರಂತದಲ್ಲಿ 15 ಮಂದಿ ವಲಸಿಗರು ಸಾವನ್ನಪ್ಪಿದ ಘಟನೆ ಬಗ್ಗೆ ತನಿಖೆಗೆ ರೈಲ್ವೇ ಆದೇಶಿಸಿದೆ.


ಇಂದು ಬೆಳಿಗ್ಗೆ ನಡೆದ ಘಟನೆಯಲ್ಲಿ ರೈಲು ಹಳಿ ಮೇಲೆ ಕೂತಿದ್ದ 15 ವಲಸಿಗರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೇ, ರೈಲು ಹಳಿ ಮೇಲೆ ಜನರು ಕೂತಿರುವುದು ಕಂಡು ಗೂಡ್ಸ್ ರೈಲು ಚಾಲಕ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದರೆ ರೈಲು ನಿಲ್ಲದೇ ಅಲ್ಲಿದ್ದವರ ಮೇಲೆ ಹರಿದಿದೆ ಎಂದಿದೆ. ಹಾಗಿದ್ದರೆ ಇವರಿಗೆ ರೈಲು ಹಳಿಗಳ ಮೇಲೆ ಕೂರಲು ಅನುಮತಿ ಕೊಟ್ಟಿದ್ದು ಹೇಗೆ? ಇವರು ರೈಲು ಹಳಿಗಳ ಮೇಲೆ ಕೂತಿದ್ದನ್ನು ಮೊದಲೇ ಯಾಕೆ ಯಾರೂ ಗಮನಿಸಿಲ್ಲ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಶಾಖಪಟ್ಟಣ ದುರಂತದ ಮರುದಿನವೇ ಮತ್ತೊಂದು ಆಘಾತ: 15 ವಲಸಿಗರ ಸಾವು