Select Your Language

Notifications

webdunia
webdunia
webdunia
webdunia

ಫ್ರಾನ್ಸ್‌, ಅಮೆರಿಕಾ ಆಯ್ತು, ಈಗ ಮಾರಿಷಸ್‌ನತ್ತ ಪ್ರಧಾನಿ ಮೋದಿ: ಈ ಭೇಟಿ ಉದ್ದೇಶವೇನು ಗೊತ್ತಾ

Prime Minister Narendra Modi

Sampriya

ನವದೆಹಲಿ , ಶನಿವಾರ, 22 ಫೆಬ್ರವರಿ 2025 (15:02 IST)
ನವದೆಹಲಿ: ಫ್ರಾನ್ಸ್‌ ಮತ್ತು ಅಮೆರಿಕ ಪ್ರವಾಸವನ್ನು ಮುಗಿಸಿಬಂದಿರುವ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 11ರಿಂದ ಮಾರಿಷನ್‌ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಅವರು ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಮೋದಿ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಮಾರಿಷಸ್ ಪ್ರಧಾನಿ ನವೀನ್ ರಾಮ್‌ಗೂಲಂ ಖಚಿತಪಡಿಸಿದ್ದಾರೆ.

ಪ್ರತಿ ವರ್ಷ ಮಾರ್ಚ್‌ 12ರಂದು ಮಾರಿಷಸ್‌ ರಾಷ್ಟ್ರೀಯ ದಿನವನ್ನಾಗಿ ಆಚರಣೆ ಮಾಡುತ್ತದೆ. ಈ ದಿನವು 1968ರಲ್ಲಿ ಬ್ರಿಟಿಷ್‌ ಆಳ್ವಿಕೆಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದ ಸೂಚಕವಾಗಿದೆ. ಕಾರ್ಯಕ್ರಮದ ಬಳಿಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆಗಳೂ ಇವೆ.

ನಮ್ಮ ದೇಶದ ಸ್ವಾತಂತ್ರ್ಯದ 57ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ಮೋದಿ ಅವರು ಒಪ್ಪಿದ್ದಾರೆ. ಇದು ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಾಕ್ಷಿಯಾಗಲಿದೆ ಎಂದು ರಾಮ್‌ಗೂಲಂ ಅವರು ಶುಕ್ರವಾರ ಸದನದಲ್ಲಿ ಹೇಳಿದ್ದಾರೆ.

ಮೋದಿ ಅವರು ಕಾರ್ಯದ ಒತ್ತಡದ ನಡುವೆಯು ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಇಂತಹ ಪ್ರತಿಷ್ಠತ ವ್ಯಕ್ತಿಗೆ ಅತಿಥ್ಯ ವಹಿಸುವುದು ನಿಜಕ್ಕೂ ನಮ್ಮ ದೇಶದ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರಿಗೆ ಸಂಬಳ ಆಗಿಲ್ಲ ಸಾರ್ ಎಂದರೆ ಮಧು ಬಂಗಾರಪ್ಪ ಪ್ರತಿಕ್ರಿಯೆ ಏನಿತ್ತು ನೋಡಿ