Select Your Language

Notifications

webdunia
webdunia
webdunia
webdunia

ದೇಶವನ್ನೇ ಬೆಚ್ಚಿಬೀಳಿಸಿದ ಪುಲ್ವಾಮಾ ದಾಳಿಗೆ ಆರು ವರ್ಷ: ಹುತಾತ್ಮರನ್ನು ಸ್ಮರಿಸಿ ಮೋದಿ ಹೇಳಿದ್ದೇನು

Pulwama terror attack

Sampriya

ನವದೆಹಲಿ , ಶುಕ್ರವಾರ, 14 ಫೆಬ್ರವರಿ 2025 (15:05 IST)
Photo Courtesy X
ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆರು ವರ್ಷಗಳ ಹಿಂದೆ ಭಾರತೀಯ ಸೇನೆಯ ಭದ್ರತಾಪಡೆಗಳ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯು ಭಾರತ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಕರಾಳ ನೆನಪಿಗೆ ಈಗ ಆರು ವರ್ಷ.

2019ರ ಫೆಬ್ರವರಿ 1ರಂದು 40 ಸಿಆರ್‌ಪಿಎಫ್ ಅಧಿಕಾರಿಗಳು ಹುತಾತ್ಮರಾಗಿದ್ದರು.  ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡರು.

ಪುಲ್ವಾಮದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿ, ರಾಷ್ಟ್ರಕ್ಕಾಗಿ ಅವರ ಅಚಲ ಸಮರ್ಪಣೆಯನ್ನು ಮುಕ್ತಕಂಠದಲ್ಲಿ ಶ್ಲಾಘಿಸಿದರು.

ಅಮೆರಿಕಾ ಪ್ರವಾಸದಲ್ಲಿರುವ  ಮೋದಿ ಅವರು ಎಕ್ಸ್‌ನಲ್ಲಿ ಹೇಳಿಕೆಯನ್ನು ಪೋಸ್ಟ್‌ ಮಾಡಿ, 2019 ರಲ್ಲಿ ಪುಲ್ವಾಮಾದಲ್ಲಿ ನಾವು ಕಳೆದುಕೊಂಡ ಧೈರ್ಯಶಾಲಿ ವೀರರಿಗೆ ನಮನಗಳು. ಮುಂಬರುವ ಪೀಳಿಗೆಗಳು ಅವರ ತ್ಯಾಗ ಮತ್ತು ರಾಷ್ಟ್ರಕ್ಕಾಗಿ ಅವರ ಅಚಲವಾದ ಸಮರ್ಪಣೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ಶ್ಲಾಘಿಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಗಣ್ಯರು ಹುತಾತ್ಮರಿಗೆ ನಮನ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಮ್ ಬ್ಯಾಕ್: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್