Select Your Language

Notifications

webdunia
webdunia
webdunia
webdunia

ಮಹಾಕುಂಭಮೇಳದತ್ತ ನರೇಂದ್ರ ಮೋದಿ: ಪವಿತ್ರ ಸ್ನಾನ ಸೇರಿ ಪ್ರಧಾನಿ ನಾಳೆಯ ಕಾರ್ಯಕ್ರಮ ಹೀಗಿದೆ

 Prime Minister Narendra Modi

Sampriya

ನವದೆಹಲಿ , ಮಂಗಳವಾರ, 4 ಫೆಬ್ರವರಿ 2025 (17:22 IST)
Photo Courtesy X
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಳೆ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಬುಧವಾರ ಪವಿತ್ರ ಸ್ನಾನ ಮಾಡಲಿದ್ದಾರೆ.

ಪ್ರಧಾನಿ ಮೋದಿ ಬೆಳಗ್ಗೆ 10.05 ಕ್ಕೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಬೆಳಗ್ಗೆ 10.10 ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ, ನಂತರ 10.45 ಕ್ಕೆ ಏರಿಯಲ್ ಘಾಟ್‌ಗೆ ತೆರಳಲಿದ್ದಾರೆ. 10.50 ಕ್ಕೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ಬೆಳಗ್ಗೆ 11.00 ರಿಂದ 11.30 ರವರೆಗೆ ಸಂಗಮ್ ಘಾಟ್‌ನಲ್ಲಿ ಸ್ನಾನ ಮಾಡಲಿದ್ದಾರೆ.

ಬೆಳಗ್ಗೆ 11.45 ಕ್ಕೆ ಅವರು ದೋಣಿಯಲ್ಲಿ ಏರಿಯಲ್ ಘಾಟ್‌ಗೆ ಹಿಂತಿರುಗಿ ನಂತರ ಡಿಪಿಎಸ್ ಹೆಲಿಪ್ಯಾಡ್‌ಗೆ ವಾಪಸ್‌ ಆಗ್ತಾರೆ. ಅಲ್ಲಿಂದ ಅವರು ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಮಧ್ಯಾಹ್ನ 12.30 ಕ್ಕೆ ವಾಯುಪಡೆಯ ವಿಮಾನದಲ್ಲಿ ಪ್ರಯಾಗ್‌ರಾಜ್‌ನಿಂದ ಹೊರಡಲಿದ್ದಾರೆ.

ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಸಂತರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ. ಜೊತೆಗೆ 2025 ರ ಮಹಾಕುಂಭದಲ್ಲಿ  ಭಾಗವಹಿಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದೊಡ್ಡ ಘಟನೆಯಲ್ಲ: ಹೇಮಾ ಮಾಲಿನಿ