ನವದೆಹಲಿ: ಕೆಲವರು ಬಡವರ ಮನೆಯಲ್ಲಿ ಫೋಟೋಶೂಟ್ ಮಾಡಿಸಿ ಮನರಂಜನೆ ಪಡೀತಾರೆ. ಅವರಿಗೆ ಬಡವರ ಮಾತುಗಳು ಬೋರ್ ಆಗಲಿದೆ. ಆದರೆ, ಬಡವರ ಸಿಟ್ಟನ್ನು ಅರ್ಥ ಮಾಡಿಕೊಳ್ಳಬಲ್ಲೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕುಟುಕಿದರು.
ನಾವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಾವು ಬಯಸುತ್ತೇವೆ. ನಮ್ಮ ದೇಶದಲ್ಲಿ ಪ್ರಧಾನ ಮಂತ್ರಿ ಇದ್ದರು. ಅವರನ್ನು ಮಿಸ್ಟರ್ ಕ್ಲೀನ್ ಎಂದು ಕರೆಯಲಾಗುತ್ತಿತ್ತು. ಒಂದು ರೂಪಾಯಿ ಬಿಡುಗಡೆ ಮಾಡಿದರೆ ಬಡವರಿಗೆ 15 ಪೈಸೆ ತಲುಪುತ್ತದೆ ಎಂದು ಹೇಳಿದ್ದರು. ಎಲ್ಲಾ ಕಡೆ ಅವರದ್ದೇ ಸರ್ಕಾರ ಇದ್ದರೂ ಈ ಹೇಳಿಕೆ ನೀಡಿದ್ದರು. ಬಾಕಿ ಹಣ ಎಲ್ಲಿ ಹೋಗುತ್ತಿತ್ತು ಜನರಿಗೆ ಗೊತ್ತಿದೆ. ಉಳಿತಾಯ ಮತ್ತು ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ಮೋದಿ ಮಾತನಾಡಿದರು.
ಬಡವರಿಗೆ ಸುಳ್ಳಿನ ಘೋಷಣೆ ಅಲ್ಲ, ಸತ್ಯವಾದ ಅಭಿವೃದ್ಧಿ ನೀಡಿದ್ದೇವೆ. ಮಧ್ಯಮ ವರ್ಗದ ಕನಸು ಈಡೇರಿಸಿದ್ದೇವೆ. ಬಡವರಿಗೆ ಈವರೆಗೂ ನಾಲ್ಕು ಕೋಟಿ ಮನೆ ಸಿಕ್ಕಿದೆ. ಕಷ್ಟ ಅನುಭವಿಸಿದರಿಗೆ ಪಕ್ಕಾ ಮನೆಯ ಬೆಲೆ ಏನು ಗೊತ್ತಾಗುತ್ತದೆ. ಮಹಿಳೆಯರಿಗಾಗಿ 12 ಕೋಟಿಗೂ ಅಧಿಕ ಶೌಚಾಲಯ ನಿರ್ಮಾಣ ಮಾಡಿದ್ದೇವೆ ಎಂದರು.
ಪ್ರತಿ ಮನೆಗೆ ಕುಡಿಯುವ ನೀರು ನೀಡುವುದು ನಮ್ಮ ಉದ್ದೇಶ. ಜಲ ಜೀವನ್ ಮಿಷನ್ ಅಡಿ 12 ಕುಟುಂಬಗಳಿಗೆ ಕುಡಿಯುವ ನೀರು ನೀಡಿದ್ದೇವೆ ಎಂದು ಸರ್ಕಾರದ ಸಾಧನೆ ತಿಳಿಸಿದರು.
ದೇಶದ ಜನರು ಹತ್ತು ವರ್ಷದಿಂದ ಸೇವೆ ಮಾಡಲು ಅವಕಾಶ ನೀಡಿದ್ದಾರೆ. 25 ಕೋಟಿ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಈ ಹಿಂದೆ ಗರೀಬಿ ಹಠಾವೋ ಘೋಷಣೆ ಮಾಡಿದವರು ಬಡತನ ನಿರ್ಮೂಲನೆ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.