Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಕ್ಷಮೆ ಕೋರಿದ ನಟ ಸುದೀಪ್

ಕಿಚ್ಚ ಸುದೀಪ್
ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳು ಹಾಗೂ ಗೆಳೆಯರ ಹತ್ತಿರ ಕ್ಷಮೆ ಕೇಳಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದಂದು ಅಂದುಕೊಂಡಂತೆ ಆಗಿದ್ದರೆ ಸುದೀಪ್ ನಟಿಸಿರೋ ನಿರೀಕ್ಷಿತ ಪೈಲ್ವಾನ್ ಚಲನಚಿತ್ರದ ಆಡಿಯೋ ಲಾಂಚ್ ಆಗಬೇಕಿತ್ತು.

ಆದರೆ ಆಡಿಯೋ ರಿಲೀಸ್ ದಿನವನ್ನು ಮುಂದೂಡಿರೋ ಸುದೀಪ್, ಈ ಕಾರಣಕ್ಕೆ ಗೆಳೆಯರ ಹತ್ತಿರ ಕ್ಷಮೆ ಕೇಳಿದ್ದಾರೆ.  

ಉತ್ತರ ಕರ್ನಾಟಕ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಹೀಗಾಗಿ ಎಲ್ಲ ತಂಡವನ್ನ ಪರಿಹಾರ ಕಾರ್ಯಕ್ಕೆ ನೆರವಾಗಲು ಅಲ್ಲಿಗೆ ಕಳಿಸಲಾಗಿದೆ. ಈ ಕಾರಣಕ್ಕೆ ಪೈಲ್ವಾನ್ ಫಿಲ್ಮ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹಾಕಲಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಒಂದು ನಾಯಿ ಸತ್ತದ್ದಕ್ಕೆ ಮೂರು ಚಿರತೆಗಳನ್ನು ಕೊಂದ ಭೂಪ