Publish Date: Fri, 09 Aug 2019 (09:49 IST)
Updated Date: Fri, 09 Aug 2019 (09:50 IST)
ಬೆಂಗಳೂರು: ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಸದ್ಯದ ಪರಿಸ್ಥಿತಿ ಬಗ್ಗೆ ಫೋಟೋ, ವಿಡಿಯೋ ಕಳುಹಿಸಿ ನನಗೆ ತಿಳಿಸಿ. ನನ್ನಿಂದ ಆದ ಸಹಾಯ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಟ್ವಿಟರ್ ನಲ್ಲಿ ವಿಡಿಯೋ ಮೂಲಕ ಮನವಿ ಮಾಡಿದ್ದರು.
ಆ ಮನವಿಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಅಭಿಮಾನಿಗಳು ನೆರೆಪೀಡಿತ ಪ್ರದೇಶಗಳ ವಿಡಿಯೋ, ಫೋಟೋ ಕಳುಹಿಸಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಸ್ಪಂದಿಸಿದ್ದು, ತಕ್ಷಣವೇ ಬೆಂಗಳೂರಿನಿಂದ ತಮ್ಮ ಗೆಳೆಯರ ಬಳಗವನ್ನು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಸಮೇತ ಕಳುಹಿಸಿದ್ದಾರೆ.
ಅಷ್ಟೇ ಅಲ್ಲ, ನಿಮ್ಮಲ್ಲಿ ಯಾರಾದರೂ ಅವರನ್ನು ಸೇರಿಕೊಳ್ಳಲು ಬಯಸಿದರೆ ಸೇರಿಕೊಳ್ಳಬಹುದು ಎಂದೂ ಹೇಳಿದ್ದಾರೆ. ಉತ್ತರ ಕರ್ನಾಟಕದ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.