Publish Date: Fri, 09 Aug 2019 (09:18 IST)
Updated Date: Fri, 09 Aug 2019 (09:20 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ ಸಿನಿಮಾ ಪೈಲ್ವಾನ್ ಅಡಿಯೋ ರಿಲೀಸ್ ಕಾರ್ಯಕ್ರಮ ಇಂದು ಚಿತ್ರದುರ್ಗದಲ್ಲಿ ನಡೆಯಬೇಕಿತ್ತು. ಆದರೆ ದಿಡೀರ್ ಮುಂದೂಡಲಾಗಿದೆ.
ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಕಿಚ್ಚ ಸುದೀಪ್ ಉತ್ತರ ಕರ್ನಾಟಕದ ಮಂದಿ ನೆರೆಯಿಂದಾಗಿ ಸಂಕಷ್ಟದಲ್ಲಿರುವಾಗ ನಾವು ಸಂಭ್ರಮ ಪಡುವುದು ಸರಿಯಲ್ಲ ಎಂಬ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲಾಗಿದೆ. ಇದಕ್ಕೆ ಚಿತ್ರದುರ್ಗದ ಮಂದಿಗೆ ನಮ್ಮ ಮೇಲೆ ಕ್ಷಮೆಯಿರಲಿ ಎಂದು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮದ ಆಯೋಜನೆಗೆ ಪರಿಶ್ರಮ ಪಡಬೇಕಾಗಿದ್ದ ಮಂದಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೆರವಾಗುವ ಕೆಲಸ ಮಾಡಲಿದ್ದಾರೆ. ಎಷ್ಟೋ ಜನ ಇಂದಿನ ಕಾರ್ಯಕ್ರಮಕ್ಕೆ ಪಾಸ್ ಕೊಳ್ಳಲು ಕಷ್ಟಪಟ್ಟಿರಬಹುದು. ಆದರೆ ಅವರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಇದು ಸಂಭ್ರಮ ಪಡುವ ಸಮಯವಲ್ಲ ಎನ್ನುವ ಕಾರಣಕ್ಕೆ ಕಾರ್ಯಕ್ರಮ ಮುಂದೂಡುತ್ತಿದ್ದೇವಷ್ಟೇ. ಸದ್ಯದಲ್ಲೇ ಮುಂದಿನ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದಾರೆ.