Select Your Language

Notifications

webdunia
webdunia
webdunia
webdunia

ಬುಕ್ ಮೈ ಶೋ ಎಡವಟ್ಟು! ಪಾತ್ರವೇ ಮಾಡದ ಚಂದನ್ ಕುಮಾರ್ ಹೆಸರು ಕುರುಕ್ಷೇತ್ರ ತಾರಾಗಣದಲ್ಲಿ!

ಬುಕ್ ಮೈ ಶೋ ಎಡವಟ್ಟು! ಪಾತ್ರವೇ ಮಾಡದ ಚಂದನ್ ಕುಮಾರ್  ಹೆಸರು ಕುರುಕ್ಷೇತ್ರ ತಾರಾಗಣದಲ್ಲಿ!
ಬೆಂಗಳೂರು , ಗುರುವಾರ, 8 ಆಗಸ್ಟ್ 2019 (09:28 IST)
ಬೆಂಗಳೂರು: ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಆನ್ ಲೈನ್ ಬುಕಿಂಗ್ ಶುರುವಾಗಿದೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.


ಆದರೆ ಆನ್ ಲೈನ್ ಬುಕಿಂಗ್ ತಾಣ ಬುಕ್ ಮೈ ಶೋಕುರುಕ್ಷೇತ್ರ ತಾರಾಗಣ ಪ್ರಕಟಿಸುವಾಗ ತಪ್ಪಾಗಿ ತಮ್ಮ ಹೆಸರು ಪ್ರಕಟಿಸಿರುವುದಕ್ಕೆ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕುರುಕ್ಷೇತ್ರದಲ್ಲಿ ಸಹದೇವನ ಪಾತ್ರ ಚಂದನ್ ಕುಮಾರ್ ಮಾಡಿರುವುದಾಗಿ ಫೋಟೋ ಸಮೇತ ಬುಕ್ ಮೈ ಶೋ ಮಾಹಿತಿ ನೀಡಿದೆ. ಆದರೆ ಅಸಲಿಗೆ ಚಂದನ್ ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಿಯೇ ಇಲ್ಲ. ಹಾಗಿದ್ದರೂ ತಮ್ಮ ಹೆಸರು ಹಾಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚಂದನ್ ಸ್ಪಷ್ಟನೆ ನೀಡಿದ್ದು, ನಾನು ಕುರುಕ್ಷೇತ್ರ ಸಿನಿಮಾದಲ್ಲಿ ಇಲ್ಲ ಎಂದಿದ್ದಾರೆ. ಇನ್ನು ನಟಿ ಸ್ನೇಹಾ ಹೆಸರನ್ನೂ ತಪ್ಪಾಗಿ ಬರೆಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೆರವಾಗಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆ