Select Your Language

Notifications

webdunia
webdunia
webdunia
webdunia

ಕುರುಕ್ಷೇತ್ರ ಸಿನಿಮಾ ಮೂಲಕ ತಮ್ಮ ಎರಡು ಆಸೆ ಪೂರೈಸಿಕೊಂಡ ನಟಿ ಹರಿಪ್ರಿಯಾ

ಕುರುಕ್ಷೇತ್ರ ಸಿನಿಮಾ ಮೂಲಕ ತಮ್ಮ ಎರಡು ಆಸೆ ಪೂರೈಸಿಕೊಂಡ ನಟಿ ಹರಿಪ್ರಿಯಾ
ಬೆಂಗಳೂರು , ಶುಕ್ರವಾರ, 2 ಆಗಸ್ಟ್ 2019 (09:16 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ನಟಿ ಎನಿಸಿಕೊಂಡಿರುವ ಹರಿಪ್ರಿಯಾ ಕುರುಕ್ಷೇತ್ರ ಸಿನಿಮಾದ ಅಡಿಯೋ ಹಿಟ್ ಆದ ಖುಷಿಯಲ್ಲಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿಯಾಗಿ ಹರಿಪ್ರಿಯಾ ನಟಿಸಿದ್ದ ಜುಮ್ಮಾ ಜುಮ್ಮ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವ್ಯೂ ದಾಟಿ ದಾಖಲೆ ಮಾಡಿದೆ. ಇದನ್ನು ನೋಡಿ ಖುಷಿ ಆಗಿರುವ ಹರಿಪ್ರಿಯಾ ಈ ಸಿನಿಮಾ ಮೂಲಕ ತಮ್ಮ ಎರಡು ಕನಸು ಈಡೇರಿತು ಎಂದಿದ್ದಾರೆ.

ಹರಿಪ್ರಿಯಾಗೆ ತಾವೊಂದು ಪೌರಾಣಿಕ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇತ್ತಂತೆ. ಮತ್ತೊಂದು ಆಸೆಯೆಂದರೆ ಡಿ ಬಾಸ್ ದರ್ಶನ್ ಗೆ ನಾಯಕಿಯಾಗಿ ನಟಿಸಬೇಕು ಎಂಬ ಕನಸಿತ್ತಂತೆ. ಅವೆರಡೂ ಕನಸುಗಳೂ ಈ ಸಿನಿಮಾಗಳ ಮೂಲಕ ಈಡೇರಿತು ಎಂದು ಹರಿಪ್ರಿಯಾ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಮುರಳಿ ಭರಾಟೆ ಹಾಡು ಬಿಡುಗಡೆಗೆ ಒಂದು ಟ್ವಿಸ್ಟ್