Publish Date: Mon, 16 Oct 2017 (11:03 IST)
Updated Date: Mon, 16 Oct 2017 (11:06 IST)
ನವದೆಹಲಿ: ಆರುಷಿ ಕೊಲೆ ಪ್ರಕರಣದಲ್ಲಿ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ರದ್ದುಗೊಂಡ ಹಿನ್ನಲೆಯಲ್ಲಿ ಆರೋಪಿಗಳಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ಇಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ನಾಲ್ಕು ದಿನಗಳ ಹಿಂದೆಯೇ ಇವರ ಶಿಕ್ಷೆ ರದ್ದುಗೊಂಡಿದ್ದರೂ ನ್ಯಾಯಾಲಯದ ಆದೇಶ ಪ್ರತಿ ಕೈ ಸೇರದ ಹಿನ್ನಲೆಯಲ್ಲಿ ಆರೋಪಿಗಳಾಗಿದ್ದ ಆರುಷಿ ಹೆತ್ತವರಿಗೆ ಬಿಡುಗಡೆಯ ಭಾಗ್ಯ ದೊರಕಿರಲಿಲ್ಲ.
ಇಂದು ಸ್ವತಂತ್ರರಾಗಲಿರುವ ರಾಜೇಶ್ ಮತ್ತು ನೂಪುರ್ ತಲ್ವಾರ್ ರನ್ನು ಕುಟುಂಬದವರು ಬರಮಾಡಿಕೊಳ್ಳಲಿದ್ದಾರೆ. 2008 ರಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ