Select Your Language

Notifications

webdunia
webdunia
webdunia
webdunia

ಆರುಷಿ ಕೊಲೆ ಪ್ರಕರಣ: ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಖುಲಾಸೆ

ಆರುಷಿ ಕೊಲೆ ಪ್ರಕರಣ: ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಖುಲಾಸೆ
ನವದೆಹಲಿ , ಗುರುವಾರ, 12 ಅಕ್ಟೋಬರ್ 2017 (15:01 IST)
2008ರಲ್ಲಿ ನಡೆದಿದ್ದ ಆರುಷಿ ತಲ್ವಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಇಂದು ಬಿಗ್ ರಿಲೀಫ್ ನೀಡಿ ರಾಜೇಶ್ ತಲ್ವಾರ್, ನೂಪುರ್ ತಲ್ವಾರ್ ಅವರನ್ನು ಶಿಕ್ಷೆಯಿಂದ ಖುಲಾಸೆಗೊಳಿಸಿದೆ.
ಗಾಜಿಯಾಬಾದ್‌ನಲ್ಲಿರುವ ಆರುಷಿ ಪೋಷಕರು ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸಿಬಿಐ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಬಿ.ಕೆ.ನಾರಾಯಣ ಮತ್ತು ನ್ಯಾ. ಎ.ಕೆ.ಮಿಶ‍್ರಾ ಅವರನ್ನೊಳಗೊಂಡ ಹೈಕೋರ್ಟ್ ಪೀಠವು, ಸೆಪ್ಟೆಂಬರ್ ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.
 
2008ರ ಮೇ 16ರಂದು ಜಲ್ ವಾಯು ವಿಹಾರ್ ನಲ್ಲಿರುವ ಫ್ಲಾಟ್ ನಲ್ಲಿರುವ ತನ್ನ ಬೆಡ್ ರೂಮಿನಲ್ಲಿ ಕೊಲೆಯಾಗಿದ್ದಳು. ಈಕೆಯ ಗಂಟಲನ್ನು ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಲ್ಲಿ ಕೊಯ್ದು ಹತ್ಯೆ ಮಾಡಲಾಗಿತ್ತು. ಮೊದಲಿಗೆ ಮನೆ ಕೆಲಸದವನಾಗಿದ್ದ ಹೇಮರಾಜ್, ಆರುಷಿ ಹತ್ಯೆ ಮಾಡಿದ್ದಾನೆ ಎನ್ನಲಾಗಿತ್ತು. ಆದರೆ ಅದೇ ಮನೆಯ ಟೆರೆಸ್ ನಲ್ಲಿ 2 ದಿನದ ಬಳಿಕ ಹೇಮರಾಜ್ ಶವಪತ್ತೆಯಾದ ಬಳಿಕ ಆರುಷಿ ಕೊಲೆ ಪ್ರಕರಣ ತಿರುವು ಪಡೆದುಕೊಂಡಿತ್ತು. ಇದಾದ ಬಳಿಕ ತೀವ್ರ ವಿಚಾರಣೆ ನಡೆಸಿದಾಗ ತಲ್ವಾರ್ ದಂಪತಿಯೇ ಇಬ್ಬರನ್ನು ಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದ್ದರು.
 
ತೀವ್ರ ವಿಚಾರಣೆಯ ಬಳಿಕ ಪ್ರಕರಣದಲ್ಲಿ ಆರುಷಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ದಂಪತಿ ಜೋಡಿ ಕೊಲೆ ಮಾಡಿದ್ದಾರೆಂದು 2013ರಲ್ಲಿ ಉತ್ತರ ಪ್ರದೇಶ ಕೋರ್ಟ್ ತಲ್ವಾರ್ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಮಲಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿ ಅರೆಸ್ಚ್