Publish Date: Thu, 12 Oct 2017 (13:47 IST)
Updated Date: Thu, 12 Oct 2017 (13:50 IST)
13 ವರ್ಷ ವಯಸ್ಸಿನ ಮಲಮಗಳ ಮೇಲೆ ಅತ್ಯಾಚಾರವೆಸಗಿದ 24 ವರ್ಷ ವಯಸ್ಸಿನ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆನೇಕಲ್‌ನ ಚಂದಾಪುರದಲ್ಲಿರುವ ಬೇಕರಿಯಲ್ಲಿ ಉದ್ಯೋಗಿಯಾಗಿರುವ ಶಂಕಿತ ಆರೋಪಿ ರಂಜಿತ್ ಕೇರಳ ಮೂಲದವನಾಗಿದ್ದು, ಆತನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ, ರಂಜಿತ್ ಪಶ್ಚಿಮ ಬಂಗಾಳದ ವಿಚ್ಚೇದಿತ ಮಹಿಳೆಯ ಸ್ನೇಹಿತನಾಗಿದ್ದ. ಮಹಿಳೆಗೆ 13 ಮತ್ತು 14 ವರ್ಷ ವಯಸ್ಸಿನ ಇಬ್ಬರು ಪುತ್ರಿಯರಿದ್ದಾರೆ. ಕೆಲ ವರ್ಷಗಳ ಸಂಬಂಧದ ನಂತರ ಕಳೆದ ವರ್ಷ ವಿವಾಹವಾಗಿದ್ದರು ಎನ್ನಲಾಗಿದೆ.
ಚಂದಾಪುರದಲ್ಲಿ ಬಾಡಿಗೆ ಕೋಣೆಯೊಂದನ್ನು ಪಡೆದಿದ್ದ ರಂಜಿತ್, ಬೇಕರಿಯಲ್ಲಿ ಕೆಲಸ ಮುಗಿದ ನಂತರ ಮುರುಗೇಶ್‌ಪಾಳ್ಯದಲ್ಲಿರುವ ಪತ್ನಿ ಮತ್ತು ಪೋಷಕರನ್ನು ಭೇಟಿಯಾಗಲು ತೆರಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ರಂಜಿತ್ ಹಿರಿಯ ಪುತ್ರಿಯ ಮೇಲೆ ಅತ್ಯಾಚಾರವೆಸಗಿರುವುದು ಗೊತ್ತಾಗಿದೆ. ಸಿನೆಮಾ ತೋರಿಸುವುದಾಗಿ ಚಂದಾಪುರದಲ್ಲಿರುವ ಬಾಡಿಗೆ ಕೋಣೆಗೆ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಹಿರಿಯ ಪುತ್ರಿಯ ನಡತೆಯಿಂದ ಸಂಶಯಗೊಂಡ ಮಹಿಳೆ, ಪುತ್ರಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಹಿರಂಗವಾಗಿದೆ. ಕೂಡಲೇ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಪತಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.