Select Your Language

Notifications

webdunia
webdunia
webdunia
webdunia

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿ ಜತೆ ಸೆಕ್ಸ್ ಮಾಡಿದ್ರೆ ಜೋಕೆ!

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿ ಜತೆ ಸೆಕ್ಸ್ ಮಾಡಿದ್ರೆ ಜೋಕೆ!
ನವದೆಹಲಿ , ಬುಧವಾರ, 11 ಅಕ್ಟೋಬರ್ 2017 (11:47 IST)
ನವದೆಹಲಿ: ಪತ್ನಿಗೆ ಇಷ್ಟವಿಲ್ಲದಿದ್ದರೂ ಸೆಕ್ಸ್ ಮಾಡಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಕೆಲವು ದಿನಗಳ ಹಿಂದೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್ ಇದೀಗ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿ ಜತೆ ಸೆಕ್ಸ್ ಸಂಬಂಧ ಮಾಡಿದರೆ ಅದನ್ನು ಅತ್ಯಾಚಾರವೆಂದು ಹೇಳಿದೆ.


 
15 ಕ್ಕಿಂತ 18 ವರ್ಷದೊಳಗಿನ ವಯಸ್ಸಿನ ಪತ್ನಿ ಜತೆ ಲೈಂಗಿಕ ಸಂಬಂಧ ನಡೆಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಪ್ರಾಪ್ತ ಪತ್ನಿ ಜತೆ ಲೈಂಗಿಕ ಸಂಬಂಧ ಅಪರಾಧವೇ ಎಂದು ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದೆ. ಅಲ್ಲದೆ, ದೇಶಾದ್ಯಂತ ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಗಡಿ ಬಳಿಯೇ ಅಣ್ವಸ್ತ್ರ ಅಡಗುದಾಣಗಳ ನಿರ್ಮಿಸುತ್ತಿದೆ ಪಾಕ್!