Select Your Language

Notifications

webdunia
webdunia
webdunia
webdunia

ಪತ್ನಿಗೆ ರಿವಾಲ್ವರ್ ತೋರಿಸಿ ಸೆಕ್ಸ್ ಸುಖ ಪಡೆಯುತ್ತಿದ್ದ ಪತಿ ಅರೆಸ್ಟ್

ಪತ್ನಿಗೆ ರಿವಾಲ್ವರ್ ತೋರಿಸಿ ಸೆಕ್ಸ್ ಸುಖ ಪಡೆಯುತ್ತಿದ್ದ ಪತಿ ಅರೆಸ್ಟ್
ಇಂದೋರ್ , ಶನಿವಾರ, 7 ಅಕ್ಟೋಬರ್ 2017 (14:31 IST)
ಪತಿ ನನಗೆ ರಿವಾಲ್ವರ್‌ನಿಂದ ಬೆದರಿಸಿ ಸೆಕ್ಸ್‌ ಸುಖ ಅನುಭವಿಸುತ್ತಾರೆ ಎಂದು ಮಹಿಳೆಯೊಬ್ಬಳು ಪೊಲೀಸ್ ಮಹಾನಿರ್ದೇಶಕರಿಗೆ ಲಿಖಿತ ದೂರು ನೀಡಿದ್ದಾಳೆ. 
ಇದೀಗ ನನ್ನನ್ನು ಮನೆಯಿಂದ ಹೊರಹಾಕಿದ ಪತಿ ನನ್ನ ಇಬ್ಬರು ಮಕ್ಕಳನ್ನು ಅಪಹರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
 
ಪತಿಯ ಕೆಟ್ಟ ಗುಣಗಳನ್ನು ಬಹಿರಂಗಪಡಿಸಿ ಯಾವ ರೀತಿ ತನ್ನ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದಾಗ ಪೊಲೀಸರೇ ದಂಗಾಗಿ ಹೋಗಿದ್ದಾರೆ ಎನ್ನಲಾಗಿದೆ.
 
ತಾನು ಆಪರೇಶನ್ ಮೂಲಕ ಎರಡನೇ ಮಗುವಿಗೆ ಜನ್ಮ ನೀಡಿದಾಗ ದೈಹಿಕವಾಗಿ ದುರ್ಬಲಳಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದೆ. ಐಟಿ ಉದ್ಯೋಗಿಯಾಗಿರುವ ಪತಿ ಕರ್ನವ್ ಸೆಕ್ಸ್ ಸುಖ ನೀಡುವಂತೆ ಒತ್ತಾಯಿಸುತ್ತಿದ್ದ. ನಾನು ತಿರಸ್ಕರಿಸಿದಾಗ ರಿವಾಲ್ವರ್‌ನಿಂದ ಬೆದರಿಸಿ ಸೆಕ್ಸ್ ಸುಖ ಪಡೆಯುತ್ತಿದ್ದ ಎಂದು ಪತ್ಮಿ ಶ್ವೇತಾ ಶಾಹ ತಿಳಿಸಿದ್ದಾರೆ. 
 
ಶ್ವೇತಾ ಶಾಹ ಮತ್ತು ಕರ್ನವ್ ಪ್ರೀತಿಸಿ ಮದುವೆಯಾಗಿದ್ದರೂ ವರದಕ್ಷಿಣೆಗಾಗಿ ಒತ್ತಾಯಿಸುತ್ತಿದ್ದುದಲ್ಲದೇ ನನ್ನ ಖಾತೆಯಲ್ಲಿದ್ದ 6 ಲಕ್ಷ ರೂಪಾಯಿಗಳನ್ನು ಕಿತ್ತುಕೊಂಡಿದ್ದ ಎಂದು ಶ್ವೇತಾ ದೂರಿನಲ್ಲಿ ತಿಳಿಸಿದ್ದಾಳೆ.
 
ಶ್ವೇತಾ, ತನ್ನ ಪತಿ ಹ್ಯಾಕಿಂಗ್ ಮತ್ತು ವಂಚಕನಾಗಿದ್ದು ಇತರರ ಫೇಸ್‌ಬುಕ್ ಐಡಿಯನ್ನು ಹ್ಯಾಕ್ ಮಾಡುತ್ತಿದ್ದ. ನನಗೆ ಹಲವಾರು ಬಾರಿ ಇತರರ ಫೇಸ್‌ಬುಕ್ ಐಡಿ ಹ್ಯಾಕ್ ಮಾಡಿ ತೋರಿಸಿದ್ದಾನೆ ಎಂದು ಶ್ವೇತಾ ಹೇಳಿದ್ದಾಳೆ. 
 
ಆರೋಪಿ ಪತಿ ಕರ್ನವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರು ಪಾರ್ಟಿಗಳಲ್ಲಿ ಅತ್ಯಾಚಾರಕ್ಕೊಳಗಾಗುತ್ತಾರೆ, ಜಾತ್ರೆಗಳಲ್ಲಿ ಅಲ್ಲ: ಭಾರತಿ ಶಂಕರ್