Publish Date: Sat, 07 Oct 2017 (11:36 IST)
Updated Date: Sat, 07 Oct 2017 (11:39 IST)
ಚೆನ್ನೈ: ಐದು ದಿನಗಳ ಪರೋಲ್ ಪಡೆದಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಆಸ್ಪತ್ರೆಯಲ್ಲಿರುವ ಪತಿ ನಟರಾಜನ್ ಅವರನ್ನು ಭೇಟಿಯಾಗಲು ತೆರಳಿದ್ದಾರೆ.
ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿರುವ ನಟರಾಜನ್ ಅವರನ್ನು ನೋಡಲೆಂದೇ ಶಶಿಕಲಾ ಪರೋಲ್ ಮೇಲೆ ಐದು ದಿನಗಳ ಬಿಡುವು ಪಡೆದಿದ್ದಾರೆ. ಚೆನ್ನೈ ತಲುಪಿರುವ ಶಶಿಕಲಾ ಇದೀಗ ಪತಿ ನಟರಾಜನ್ ಇರುವ ಗ್ಲೋಬಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಸಂಜೆ 4 ಗಂಟೆಯವರೆಗೆ ಇದೇ ಆಸ್ಪತ್ರೆಯಲ್ಲಿ ಶಶಿಕಲಾ ಉಳಿದುಕೊಳ್ಳಲಿದ್ದಾರೆ. ಪೆರೋಲ್ ನಿಯಮದ ಪ್ರಕಾರ ಶಶಿಕಲಾ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಮನೆ ಮತ್ತು ಆಸ್ಪತ್ರೆಗೆ ಮಾತ್ರ ಭೇಟಿ ಕೊಡಬಹುದಾಗಿದೆ. ಅದರ ಹೊರತಾಗಿ ರಾಜಕೀಯ ಸಭೆ ನಡೆಸುವುದು, ನಾಯಕರನ್ನು ಭೇಟಿ ಮಾಡುವುದು ಮಾಡಬಾರದು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ