Publish Date: Thu, 05 Oct 2017 (09:55 IST)
Updated Date: Thu, 05 Oct 2017 (09:59 IST)
ಚೆನ್ನೈ: ಅಕ್ರಮ ಆಸ್ಥಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ಪತಿ ನಟರಾಜನ್ ಅಂಗ ಕಸಿ ಶಸ್ತ್ರಚಿಕಿತ್ಸೆಯ ಸುತ್ತ ಇದೀಗ ವಿವಾದ ಅಂಟಿಕೊಂಡಿದೆ.
ಚೆನ್ನೈನ ಗ್ಲೋಬಲ್ ಸಿಟಿ ಆಸ್ಪತ್ರೆಯಲ್ಲಿ ನಟರಾಜನ್ ಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೇ ಆಸ್ಪತ್ರೆಗೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ 19 ವರ್ಷದ ಯುವಕ ದಾಖಲಾಗಿದ್ದ. ಆತನ ಅಂಗಾಂಗಳನ್ನು ನಟರಾಜನ್ ಗೆ ಜೋಡಿಸಲಾಗಿದೆ.
ಈ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಲಾಗಿದೆ. ಆದರೆ ಆಸ್ಪತ್ರೆ ಮೂಲಗಳು ಇದನ್ನು ನಿರಾಕರಿಸಿದ್ದು, ಅಂಗಾಂಗ ಆಕಾಂಕ್ಷಿಗಳ ಪಟ್ಟಿಯಲ್ಲಿ ನಟರಾಜನ್ ಹೆಸರು ಮುಂಚೂಣಿಯಲ್ಲಿತ್ತು. ಹೀಗಾಗಿ ಯುವಕನ ಕುಟುಂಬದವರ ಒಪ್ಪಿಗೆಯೊಂದಿಗೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಲ್ಲದೆ, ಯುವಕನ ಒಂದು ಮೂತ್ರಪಿಂಡವನ್ನು ಸರ್ಕಾರಿ ಆಸ್ಪತ್ರೆಗೆ ನೀಡಲಾಗಿದೆ.
ಉಳಿದ ಅಂಗಾಂಗಳನ್ನು ನಿಯಮದಂತೇ ಗ್ಲೋಬಲ್ ಆಸ್ಪತ್ರೆಗೆ ಬಳಸಲು ಅವಕಾಶವಿದೆ ಎಂದು ಆಸ್ಪತ್ರೆ ಸ್ಪಷ್ಟನೆ ನೀಡಿದೆ. ನಟರಾಜನ್ ಗೆ ಒಂದು ಕಿಡ್ನಿ ಮತ್ತು ಪಿತ್ತಜನಕಾಂಗವನ್ನು ಶಸ್ತ್ರಚಿಕಿತ್ಸೆ ಮೂಲಕ ಜೋಡಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ