Publish Date: Thu, 05 Oct 2017 (09:32 IST)
Updated Date: Thu, 05 Oct 2017 (09:34 IST)
ಮುಂಬೈ: ಪ್ರಾಣಿಗಳೇ ಆದರೂ ಅವರಿಗೂ ಜೀವಿಸುವ ಹಕ್ಕಿಲ್ಲವೇ? ಆದರೆ ಪುಣೆಯಲ್ಲಿ ನಡೆದ ಧಾರುಣ ಘಟನೆಯೊಂದಲ್ಲಿ ದುಷ್ಕರ್ಮಿಗಳು ಜೀವಂತವಾಗಿ ನಾಯಿಗಳ ಮಾರಣ ಹೋಮ ನಡೆಸಿದ್ದಾರೆ.
ನಾಲ್ಕು ನಾಯಿಗಳನ್ನು ಒಟ್ಟಾಗಿ ಹಗ್ಗ ಕಟ್ಟಿ ಬೆಂಕಿ ಹಚ್ಚಿ ಕೊಂದಿರುವ ದುಷ್ಕರ್ಮಿಗಳು, ಸುಮಾರು 16 ಕ್ಕೂ ಹೆಚ್ಚು ನಾಯಿಗಳಿಗೆ ವಿಷಪ್ರಾಷನ ಮಾಡಿಸಿ ಕೊಂದು ಹಾಕಿದ್ದಾರೆ.
ಸ್ಥಳಕ್ಕೆ ಸ್ವಯಂ ಸೇವಾ ಸಂಘಟನೆ ಅಧಿಕಾರಿಗಳು ಭೇಟಿಕೊಟ್ಟಿದ್ದು ಸುಮಾರು 20 ಕ್ಕೂ ಹೆಚ್ಚು ಶ್ವಾನಗಳ ಕಳೇಬರ ಪತ್ತೆಯಾಗಿರುವುದಾಗಿ ಹೇಳಿದ್ದಾರೆ. ಇದೀಗ ಶ್ವಾನಗಳ ದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ನಂತರ ಘಟನೆ ಬಗ್ಗೆ ಎಫ್ ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ