Publish Date: Fri, 29 Sep 2017 (11:31 IST)
Updated Date: Fri, 29 Sep 2017 (11:34 IST)
ನವದೆಹಲಿ: ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾಗಿರುವ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹಿಂ ಬಳಸುತ್ತಿದ್ದ ಎರಡು ರಹಸ್ಯ ಕೋಡ್ ವರ್ಡ್ ಗಳನ್ನು ಆತನ ಸಹೋದರ ಇಕ್ಬಾಲ್ ಕಸ್ಕರ್ ಬಹಿರಂಗಪಡಿಸಿದ್ದಾನೆ.
ದಾವೂದ್ ನ ಡಿ ಕಂಪನಿಯಲ್ಲಿ ಕ್ರಿಮಿನಲ್ ವ್ಯವಹಾರ ಮಾಡುವಾಗ ಆತ ದೆಹಲಿಗೆ ‘ಮೋದಿ’ ಎಂದೂ ಕರಾಚಿಗೆ ‘ಚೋಟಾ ಶಕೀಲ್’ ಎಂದೂ ಕೋಡ್ ವರ್ಡ್ ಬಳಸುತ್ತಿದ್ದ ಎಂದು ಕಸ್ಕರ್ ಹೇಳಿದ್ದಾನೆ.
ಮುಂಬೈ ಪೊಲೀಸರ ವಶದಲ್ಲಿರುವ ಕಸ್ಕರ್ ವಿಚಾರಣೆ ವೇಳೆ ದಾವೂದ್ ಗೆ ಸಂಬಂಧಿಸಿದ ಹಲವು ವಿಷಯಗಳನ್ನು ಬಾಯ್ಬಿಟ್ಟಿದ್ದಾನೆ. ಅದರಲ್ಲಿ ಇದೂ ಒಂದಾಗಿದೆ. ದಾವೂದ್ ನನ್ನು ‘ಬಡೇ’ ಎಂದೂ, ಪೊಲೀಸ್ ವಾಹನವನ್ನು ‘ಡಬ್ಬಾ’ ಎಂದು ರಹಸ್ಯ ಭಾಷೆಯಲ್ಲಿ ಕರೆಯಲಾಗುತ್ತಿತ್ತು ಎಂದು ಆತ ಹೇಳಿದ್ದಾನೆ.
ಆತನ ಭಾಷೆಯಲ್ಲಿ ಏಕ್ ಪೆಟ್ಟಿ ಎಂದರೆ ಒಂದು ಲಕ್ಷ ರೂ. ಏಕ್ ಬಾಕ್ಸ್ ಎಂದರೆ ಒಂದು ಕೋಟಿ ರೂ. ಎಂದೂ ಅರ್ಥ ಎಂದು ಕಸ್ಕರ್ ಹೇಳಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ