Select Your Language

Notifications

webdunia
webdunia
webdunia
Wednesday, 9 April 2025
webdunia

ಸೆಕ್ಸ್ ಮಾಡಿ ಕೈಕೊಟ್ಟಿದ್ದಕ್ಕೆ ಉಗ್ರನನ್ನು ಕೊಲ್ಲಲು ನೆರವಾದ ಪ್ರಿಯತಮೆ!

ಜೈಶ್-ಎ-ಮೊಹಮ್ಮದ್
ಜಮ್ಮು ಕಾಶ್ಮೀರ , ಮಂಗಳವಾರ, 10 ಅಕ್ಟೋಬರ್ 2017 (09:10 IST)
ಜಮ್ಮು ಕಾಶ್ಮೀರ: ನಾರಿ ಮುನಿದರೆ ಮಾರಿ ಎನ್ನುವ ಮಾತು ಜಮ್ಮು ಮತ್ತು ಕಾಶ್ಮೀರದಲ್ಲಿ ಇಷ್ಟು ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸಿದ್ದ ಉಗ್ರ ಉಮರ್ ಖಾಲಿದ್ ವಿಷಯದಲ್ಲಿ ಸತ್ಯವಾಗಿದೆ.

 
ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಖಾಲಿದ್ ತನ್ನನ್ನು ಪ್ರೀತಿಸಿದ ಹುಡುಗಿಗೇ ಕೈಕೊಟ್ಟಿದ್ದ. ಹುಡುಗಿಯರ ಹುಚ್ಚನಾಗಿದ್ದ ಈತನನ್ನು ಪ್ರೀತಿಸಿ ಬಂದಿದ್ದ ಯುವತಿ ಜತೆ ಸೆಕ್ಸ್ ನಡೆಸಿ ಆಕೆ ಗರ್ಭಿಣಿ ಎಂದು ಗೊತ್ತಾದ ತಕ್ಷಣ ದೂರ ತಳ್ಳಿದ್ದ.

ನಿನ್ನ ಹೊಟ್ಟೆಯಲ್ಲಿರುವ ಕುಡಿಗೂ ನನಗೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡಿದ್ದ. ಇದರಿಂದ ರೊಚ್ಚಿಗೆದ್ದ ಯುವತಿ ಮನೆಯವರಿಗೂ ಗೊತ್ತಾಗದ ಹಾಗೆ ಪಂಜಾಬ್ ನ ಜಲಂಧರ್ ಗೆ ತೆರಳಿ ಗರ್ಭಪಾತ ಮಾಡಿದ್ದಳು. ನಂತರ ತನಗೆ ಮೋಸ ಮಾಡಿದ ಖಾಲಿದ್ ನನ್ನು ಕೊಲ್ಲುವುದಾಗಿ ಶಪಥ ಮಾಡಿದ್ದಳು.

ಅದರಂತೆ ಕಳೆದ ವರ್ಷ ಜಮ್ಮುವಿನ ಹಿರಿಯ ಪೊಲೀಸ್ ಅಧಿಕಾರಿ ಕಚೇರಿಗೆ ಆಗಮಿಸಿದ ಆಕೆ ಉಮರ್ ಖಾಲಿದ್ ನನ್ನು ಕೊಲ್ಲಲು ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದಳು. ಅದರಂತೆ ಉಗ್ರನ ವಾಸಸ್ಥಳ, ಚಲನವಲನಗಳ ಸಂಪೂರ್ಣ ಮಾಹಿತಿ ನೀಡಿದ್ದಳು. ನಿನ್ನೆ ಈತ ಸೋಪೋರ್ ಗೆ ಭೇಟಿ ನೀಡುತ್ತಿರುವ ವಿಚಾರವನ್ನೂ ಈಕೆಯೇ ಪೊಲೀಸರಿಗೆ ನೀಡಿದ್ದಳು. ಅದರಂತೆ ಆತನನ್ನು ಸುತ್ತುವರಿದ ಪೊಲೀಸರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಇದರೊಂದಿಗೆ ತನ್ನ ಸೇಡು ತೀರಿಸಿಕೊಂಡಿದ್ದಲ್ಲದೆ, ದೇಶಕ್ಕೂ ಒಳ್ಳೆಯದನ್ನೇ ಮಾಡಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ಯುದ್ಧಕ್ಕೆ ನಡೆದಿದೆ ತಯಾರಿ!