Select Your Language

Notifications

webdunia
webdunia
webdunia
webdunia

‘ರಾಹುಲ್ ಗಾಂಧಿ ಇನ್ನೂ ಡ್ಯಾಪರ್ ಹಾಕಿಕೊಳ್ಳುವ ಮಗು’

ರಾಹುಲ್ ಗಾಂಧಿ
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ವೆಬ್ ಸೈಟ್ ವಾಹಿನಿಯ ವರದಿ ಉಲ್ಲೇಖಿಸಿ ಟೀಕಿಸಿರುವ ರಾಹುಲ್ ಗಾಂಧಿ ಇನ್ನೂ ಡ್ಯಾಪರ್ ಹಾಕಿಕೊಳ್ಳುವ ಮಗು ಎಂದು ಬಿಜೆಪಿ ನಾಯಕ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.

 
ಪತ್ರಿಕೋದ್ಯಮದಲ್ಲಿ ಇತ್ತೀಚೆಗೆ ಒಂದು ಫ್ಯಾಷನ್ ಶುರುವಾಗಿದೆ. ಪ್ರಮುಖ ವ್ಯಕ್ತಿಗಳ ಬಗ್ಗೆ ಇಲ್ಲಸಲ್ಲದ ಸುದ್ದಿ ಪ್ರಕಟಿಸಿ ಪ್ರಚಾರ ಗಿಟ್ಟಿಸಿಕೊಳ್ಳುವುದು. ಇದೂ ಕೂಡಾ ಅಷ್ಟೇ. ಇದನ್ನೇ ದಾಳವಾಗಿಟ್ಟುಕೊಂಡು ಟೀಕಿಸುತ್ತಿರುವ ರಾಹುಲ್ ಇನ್ನೂ ಮಗು. ಕಲಿಯಬೇಕಾದ್ದು ಬೇಕಾದಷ್ಟು ಇದೆ ಎಂದು ಬಿಜೆಪಿ ನಾಯಕ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಭ್ರಷ್ಟಾಚಾರದ ಕಾವಲುಗಾರನಾಗಿರುತ್ತೇನೆಂದು ಹೇಳಿಕೊಂಡು ಭ್ರಷ್ಟಾಚಾರದ ಪಾಲುದಾರನಾಗಿದ್ದಾರೆ ಎಂದು ಅಮಿತ್ ಶಾ ಪರ ನಿಂತಿರುವುದಕ್ಕೆ ರಾಹುಲ್ ಗಾಂಧಿ ಟೀಕಿಸಿದ್ದರು. ಇದಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಶಾ ಪುತ್ರನ ಕಂಪೆನಿ ಆದಾಯ ಹೆಚ್ಚಳ: ಮೋದಿ ವಿರುದ್ಧ ರಾಹುಲ್ ಟೀಕೆ