Select Your Language

Notifications

webdunia
webdunia
webdunia
webdunia

ಸೋನಿಯಾ, ರಾಹುಲ್ ಗೆ ಸ್ವಪಕ್ಷದ ಪ್ರಮುಖ ನಾಯಕನಿಂದಲೇ ವ್ಯಂಗ್ಯ

ಸೋನಿಯಾ, ರಾಹುಲ್ ಗೆ ಸ್ವಪಕ್ಷದ ಪ್ರಮುಖ ನಾಯಕನಿಂದಲೇ ವ್ಯಂಗ್ಯ
ನವದೆಹಲಿ , ಸೋಮವಾರ, 9 ಅಕ್ಟೋಬರ್ 2017 (10:41 IST)
ನವದೆಹಲಿ: ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ಪುತ್ರ ರಾಹುಲ್ ಗಾಂಧಿ ವಿರುದ್ಧವೇ ವ್ಯಂಗ್ಯವಾಡಿದ್ದಾರೆ.

 
ಕಾಂಗ್ರೆಸ್ ನ ಮುಂದಿನ ಅಧ್ಯಕ್ಷರಾಗುವವರ ಬಗ್ಗೆ ಮಾತನಾಡಿರುವ ಅಯ್ಯರ್, ಅಮ್ಮ ಅಥವಾ ಮಗನೇ ಪಕ್ಷದ ಅಧ್ಯಕ್ಷರಾಗಬಹುದಷ್ಟೇ. ರಾಹುಲ್ ತಾವು ಆಂತರಿಕ ಚುನಾವಣೆಗೆ ರೆಡಿ ಎಂದರೂ, ಅವರ ವಿರುದ್ಧ ಸ್ಪರ್ಧಿಸುವವರು ಇದ್ದರಲ್ಲವೇ ಚುನಾವಣೆಯ ಪ್ರಶ್ನೆ? ಎಂದು ಅವರು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ರಾಹುಲ್ ಅವರೇ ಕಾಂಗ್ರೆಸ್ ನ ಮುಂದಿನ ಅಧ್ಯಕ್ಷ ಎಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲೇ ಹಿರಿಯ ನಾಯಕನ ಈ ಮಾತುಗಳು ಕುತೂಹಲ ಕೆರಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಕಷ್ಟಕ್ಕೆ ಸಿಲುಕಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ