Select Your Language

Notifications

webdunia
webdunia
webdunia
webdunia

ಕಾಲೇಜ್ ಕ್ಯಾಪಸ್ ಒಳಗೆ ಚಹಾ ಮಾರಲು ತಡೆದ ಪೊಲೀಸ್ ಅಧಿಕಾರಿಯ ಮುಖಕ್ಕೆ ಚಹಾ ಎರಚಿದ ಮಹಿಳೆ

ಪಾಟ್ನಾ
ಪಾಟ್ನಾ , ಗುರುವಾರ, 24 ಡಿಸೆಂಬರ್ 2020 (09:55 IST)
ಪಾಟ್ನಾ : ಪೊಲೀಸರ್ ಅಧಿಕಾರಿಯ ಮುಖದ ಮೇಲೆ ಮಹಿಳೆಯೊಬ್ಬಳು ಬಿಸಿ ಚಹಾ ಎರಚಿದ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ.

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಬಳಿ ಮಹಿಳೆಯೊಬ್ಬಳು ಗೇಟ್ ಒಳಗೆ ಅತಿಕ್ರಮಣ ಪ್ರವೇಶ ಮಾಡಿ ಚಹಾ ಮಾರುತ್ತಿದ್ದಳು, ಈ ಬಗ್ಗೆ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿ ಮಹಿಳೆಯನ್ನು ತಡೆಯಲು ಬಂದಿದ್ದಾರೆ. ಆ ವೇಳೆ ಕೋಪಗೊಂಡ ಮಹಿಳಾ ಅಧಿಕಾರಿಯ ಮುಖಕ್ಕೆ ಬಿಸಿ ಚಹಾ ಎರಚಿದ್ದಾಳೆ.

ನೆಲದ ಮೇಲೆ ಬಿದ್ದ ಪೊಲೀಸ್ ಅಧಿಕಾರಿಯನ್ನು ಕ್ಯಾಂಪಸ್ ಭದ್ರತಾ ಸಿಬ್ಬಂದಿ ತುರ್ತು ವಾರ್ಡ್ ಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀನ್ಸ್ ಹಾಕಿ ಕುಣಿಯಲಿಲ್ಲವೆಂದು ಪತ್ನಿಗೇ ತಲಾಖ್ ಕೊಟ್ಟ ಭೂಪ!