Select Your Language

Notifications

webdunia
webdunia
webdunia
webdunia

15 ವರ್ಷದ ಹುಡುಗಿಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಅಕ್ಕ ಕೊನೆಗೆ ಮಾಡಿದ್ದೇನು?

15 ವರ್ಷದ ಹುಡುಗಿಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಅಕ್ಕ ಕೊನೆಗೆ ಮಾಡಿದ್ದೇನು?
ಭೋಪಾಲ್ , ಸೋಮವಾರ, 21 ಡಿಸೆಂಬರ್ 2020 (07:07 IST)
ಭೋಪಾಲ್ :  15 ವರ್ಷದ ಹುಡುಗಿಯನ್ನು ಆಕೆಯ ಅಕ್ಕ ಮಾದಕ ದ್ಯವ್ಯ ನೀಡಿ ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.

ಅಕ್ಕ ಸಂತ್ರಸ್ತೆಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಅವಳಿಗೆ ಗಾಂಜಾಗಳನ್ನು ನೀಡಿ ಬಳಿಕ 2000ರೂ ಗೆ ಪುರುಷನೊಬ್ಬನಿಗೆ ಒಪ್ಪಿಸಿದ್ದಾಳೆ. ಬಳಿಕ ಆಕೆಯನ್ನು ಹಲವಾರು ಸ್ಥಳಗಳಿಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.

ಸಂತ್ರಸ್ತೆಯ ತಾಯಿ ಮಗಳನ್ನು ಡಿ-ಅಡಿಕ್ಷನ್ ಆಶ್ರಯಕ್ಕೆ ಕಳುಹಿಸಿದಾಗ ಅಲ್ಲಿ ಆಕೆ ತನ್ನ ಪರಿಸ್ಥಿತಿಯನ್ನು ಸಲಹೆಗಾರರಿಗೆ ತಿಳಿಸಿದ್ದಾಳೆ. ಅವರು ತಕ್ಷಣ ಸಂತ್ರಸ್ತೆಯ ತಾಯಿಗೆ ತಿಳಿಸಿದ ಹಿನ್ನಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆಯ ಅಕ್ಕ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯರನ್ನು ಲೈಂಗಿಕತೆಗೆ ಒತ್ತಾಯಿಸುತ್ತಿದ್ದ ಸರ್ಕಾರಿ ಶಿಕ್ಷಕ ಅರೆಸ್ಟ್