Publish Date: Sun, 20 Dec 2020 (07:04 IST)
Updated Date: Sun, 20 Dec 2020 (07:11 IST)
ಪುಣೆ : ನಿದ್ರೆ ಮಾಡುತ್ತಿದ್ದ 33 ವರ್ಷದ ವಿವಾಹಿತ ಅಕ್ಕನನ್ನು 25 ವರ್ಷದ ಸಹೋದರ ಅನುಚಿತವಾಗಿ ಸ್ಪರ್ಶಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ದೂರದ ಗಂಡನ ಮನೆಯಿಂದ ಹೆತ್ತವರ ಮನೆಗೆ ಬಂದ ಅಕ್ಕ ರಾತ್ರಿ ನಿದ್ರಿಸುತ್ತಿದ್ದಾಗ ಮಾದಕ ದ್ರವ್ಯ ವ್ಯಸನಿ ಹಾಗೂ ಮದ್ಯದ ಚಟಕ್ಕೆ ಒಳಗಾಗಿದ್ದ ತಮ್ಮ ಅವಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಎಚ್ಚರಗೊಂಡು ಕೂಗಿಕೊಂಡ ಆಕೆಗೆ ಮರದ ಹಲಗೆಯಿಂದ ಹಲ್ಲೆ ಮಾಡಿದ್ದಾನೆ. ಇದನ್ನು ತಡೆಯಲು ಬಂದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ.
ಈ ಬಗ್ಗೆ ಅಕ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.