Select Your Language

Notifications

webdunia
webdunia
webdunia
webdunia

ಕೋಪದಲ್ಲಿ ಮಗುವನ್ನೆ ಕತ್ತು ಹಿಸುಕಿ ಕೊಂದ ತಾಯಿ!

ಮಗು
ನವದೆಹಲಿ : ಪತಿಯೊಂದಿಗೆ ಜಗಳವಾಡಿದ ಕೋಪದಲ್ಲಿ ಮಹಿಳೆಯೊಬ್ಬಳು ತನ್ನ ಮೂರು ತಿಂಗಳ ಮಗುವನ್ನೆ ಕತ್ತು ಹಿಸುಕಿ ಕೊಂದ ಘಟನೆ ನವದೆಹಲಿಯಲ್ಲಿ ನಡೆದಿದೆ.
 
ವಾಯುವ್ಯ ದೆಹಲಿಯ ಶಾಲಿಮಾರ್ ಬಾಗ್ ನಿವಾಸಿ ಅಂಜಲಿ ದೇವಿ(26) ಬಂಧಿತ ಆರೋಪಿ. ತನ್ನ ಪತಿಯೊಂದಿಗೆ ಕ್ಷುಲ್ಲಕ ವಿಚಾರಕ್ಕಾಗಿ ಅಂಜಲಿ ದೇವಿ ಜಗಳವಾಡಿದ್ದಳು.

ಇದಾದ ಬಳಿಕ ಪತಿ ಕೆಲಸಕ್ಕೆ ತೆರಳಿದ್ದರು. ಕೋಪದ ಭರದಲ್ಲಿದ್ದ ಅಂಜಲಿ ತನ್ನ ಮೂರು ತಿಂಗಳ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಳೆ.

ಈ ಬಗ್ಗೆ ಉಪ ಪೊಲೀಸ್ ಆಯುಕ್ತರಾದ ಉಷಾ ರಂಗಾನಿ ಮಾತನಾಡಿ, ತಾಯಿ ಶಿಶುವನ್ನು ಕೊಂದಿರುವ ಬಗ್ಗೆ ಅವರಿಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಅಂಜಲಿದೇವಿಯು ಮಗುವಿನ ಕುತ್ತಿಗೆಗೆ ದಾರದಿಂದ ಕತ್ತು ಹಿಸುಕಿದ್ದಾಳೆ ಎಂದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಯೋಜನೆಗೆ ಆಂಧ್ರಪ್ರದೇಶದ ತಿರುಮಲ ಆಯ್ಕೆ?