Publish Date: Fri, 01 Apr 2022 (10:05 IST)
Updated Date: Fri, 01 Apr 2022 (10:07 IST)
ಯಾದಗಿರಿ: ತುತ್ತು ಕೊಟ್ಟೋಳು ಮತ್ತು ಮುತ್ತ ಕೊಡುವವಳನ್ನು ಸರಿಯಾಗಿ ನಿಭಾಯಿಸಲಾಗದೇ ಇದ್ದರೆ ಜೀವನ ಕಷ್ಟ. ಆದರೆ ಇಲ್ಲೊಬ್ಬ ಪತಿ ಮಹಾಶಯ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದಳು ಎಂಬ ಕಾರಣಕ್ಕೆ ಹೆತ್ತ ತಾಯಿಯ ಜೀವವನ್ನೇ ತೆಗೆದಿದ್ದಾನೆ.
ತನ್ನ ಪತ್ನಿಯೊಂದಿಗೆ ತಾಯಿ ಜಗಳವಾಡುತ್ತಾಳೆ ಎಂಬ ಕಾರಣಕ್ಕೆ ಸ್ನೇಹಿತರ ಸಹಾಯದಿಂದ ಆಕೆಯನ್ನು ನದಿಗೆ ತಳ್ಳಿ ಮಗನೇ ಕೊಲೆ ಮಾಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗ ಆರೋಪಿ ಪುತ್ರ ಮತ್ತು ಆತನ ಸಂಗಡಿಗರನ್ನು ಬಂಧಿಸಿದ್ದು, ಸದ್ಯಕ್ಕೆ ನ್ಯಾಯಾಂಗ ವಶಕ್ಕೊಪ್ಪಿಸಲಾಗಿದೆ.