Publish Date: Wed, 02 Dec 2020 (06:36 IST)
Updated Date: Wed, 02 Dec 2020 (10:24 IST)
ಮುಂಬೈ : 22 ವರ್ಷದ ಯುವಕನೊಬ್ಬ ತನ್ನ ಅಪ್ರಾಪ್ತ ಸೋದರಸಂಬಂಧಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದ ಹಿನ್ನಲಯಲ್ಲಿ ಆತನಿಗೆ ಕೋರ್ಟ್ ಜೈ ಶಿಕ್ಷೆ ವಿಧಿಸಿದೆ.
ಬಾಲಕಿ ಮನೆಯವರು ಇಲ್ಲದಿದ್ದಾಗ ಯುವಕ ಬಾಲಕಿಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಇದರ ಪರಿಣಾಮ ಆಕೆ ಗರ್ಭಧರಿಸಿ ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಬಗ್ಗೆ ಆರೋಪಿ ವಿರುದ್ಧ ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ಅತ್ಯಾಚಾರಿಯನ್ನು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ಕೋರ್ಟ್ ನಲ್ಲಿ ಆರೋಪಿ ತಪಿತಸ್ಥನೆಂದು ಸಾಬೀತಾಗಿದ್ದು, ಆತನಿಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂಬುದಾಗಿ ತಿಳಿದುಬಂದಿದೆ.