Publish Date: Wed, 02 Dec 2020 (06:34 IST)
Updated Date: Wed, 02 Dec 2020 (10:21 IST)
ಚೆನ್ನೈ : 13 ವರ್ಷದ ಹುಡುಗಿಯ ಮೇಲೆ ಟಿವಿ ಪತ್ರಕರ್ತನೊಬ್ಬ ಮೂರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಚೆನ್ನೈ ನಲ್ಲಿ ನಡೆದಿದೆ.
ಹುಡುಗಿಯನ್ನು ಕಳ್ಳಸಾಗಾಣಿಕೆದಾರರು ಅಪಹರಿಸಿದ ಮೇಲೆ ಆಕೆಯ ಮೇಲೆ ಟಿವಿ ಪತ್ರಕರ್ತ ಸೇರಿ ಆರು ಮಂದಿ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಆರೋಪಿಗಳು ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದಾರೆ.
ಆ ವೇಳೆ ಆಕೆ ಅವರಿಂದ ತಪ್ಪಿಸಿಕೊಂಡು ಪೋಲೀಸರಿಗೆ ದೂರು ನೀಡಿದ್ದಾಳೆ. ಈ ಬಗ್ಗೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ಧಾಖಲಿಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.