Publish Date: Mon, 30 Nov 2020 (09:32 IST)
Updated Date: Mon, 30 Nov 2020 (09:34 IST)
ಲಕ್ನೋ: ಸೊಸೆಯ ಮೇಲೆ ಮಾನಭಂಗ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾವ ಮಹಾಶಯನೊಬ್ಬ ತನ್ನ ಪುತ್ರನನ್ನೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಳೆದ ವರ್ಷವಷ್ಟೇ ಪುತ್ರನ ವಿವಾಹವಾಗಿತ್ತು. ಎರಡು ದಿನಗಳ ಮೊದಲು ಆರೋಪಿ ತನ್ನ 25 ವರ್ಷದ ಸೊಸೆ ಮೇಲೆ ಕಾಮ ಕೃತ್ಯ ನಡೆಸಿದ್ದಾನೆ. ಪತಿ ಮನೆಗೆ ಬಂದ ಮೇಲೆ ಸಂತ್ರಸ್ತೆ ಘಟನೆಯ ವಿವರ ನೀಡಿದ್ದಾಳೆ. ಈ ವಿಚಾರವಾಗಿ ತಂದೆ ಮತ್ತು ಮಗ ಕಿತ್ತಾಡಿಕೊಂಡಿದ್ದಾರೆ. ಅಂತಿಮವಾಗಿ ತಂದೆ ತನ್ನ ಮಗನನ್ನೇ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.