Select Your Language

Notifications

webdunia
webdunia
webdunia
webdunia

ಖಾಸಗಿ ಫೋಟೋಗಳನ್ನು ಮಹಿಳೆಯ ಮಕ್ಕಳಿಗೆ ರವಾನಿಸಿದ ಲವ್ವರ್

ಖಾಸಗಿ ಫೋಟೋಗಳನ್ನು ಮಹಿಳೆಯ ಮಕ್ಕಳಿಗೆ ರವಾನಿಸಿದ ಲವ್ವರ್
ಅಹಮ್ಮದಾಬಾದ್ , ಭಾನುವಾರ, 29 ನವೆಂಬರ್ 2020 (08:28 IST)
ಅಹಮ್ಮದಾಬಾದ್: ವಿಧವೆ ಮಹಿಳೆಯೊಬ್ಬಳ ಜತೆ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಆಕೆಯ ಜತೆ ಕಳೆದಿದ್ದ ಖಾಸಗಿ ಕ್ಷಣಗಳ ಫೋಟೋಗಳನ್ನು ಆಕೆಯ ಮಕ್ಕಳಿಗೆ ರವಾನಿಸಿ ಬೆದರಿಕೆ ಹಾಕಿದ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ.


15 ವರ್ಷಗಳ ಹಿಂದೆಯೇ 43 ಮಹಿಳೆಯ ಗಂಡ ತೀರಿಕೊಂಡಿದ್ದ. ಕಳೆದ ಒಂದೂವರೆ ವರ್ಷದಿಂದ ಈಕೆ ಆರೋಪಿಯ ಜತೆ ಸಂಬಂಧವಿಟ್ಟುಕೊಂಡಿದ್ದಳು. ಕೆಲವು ದಿನಗಳಿಂದ ಆಕೆ ಇದು ಮಕ್ಕಳಿಗೆ ತಿಳಿದರೆ ಮಾನ ಹರಾಜಾಗಬಹುದೆಂದು ಸಂಬಂಧ ಕಡಿದುಕೊಳ್ಳಲು ನಿರ್ಧರಿಸಿದ್ದಳು. ಆದರೆ ಅವರ ಖಾಸಗಿ ಕ್ಷಣಗಳ ಫೋಟೋ ತೆಗೆದಿಟ್ಟುಕೊಂಡಿದ್ದ ಆರೋಪಿ ಸಂಬಂಧ ಮುಂದುವರಿಸದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಯಬಿಡುವುದಾಗಿ ಬೆದರಿಕೆ ಹಾಕುತ್ತಿದ್ದ. ಆದರೆ ಈಗ ಮಕ್ಕಳಿಗೆ ಫೋಟೋ ಕಳುಹಿಸಿ ಎಚ್ಚರಿಕೆ ನೀಡಿದ್ದ. ಹೀಗಾಗಿ ಈಗ ಮಹಿಳೆ ಪೊಲೀಸರಿಗೆ ಆರೋಪಿ ವಿರುದ್ಧ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನ