Select Your Language

Notifications

webdunia
webdunia
webdunia
webdunia

ಯುವ ನಟ-ನಟಿಯರಿಗಾಗಿ ಮಾತನಾಡಿದ್ದಕ್ಕೆ ನನಗೆ ಈ ಶಿಕ್ಷೆಯೇ? ಜಗ್ಗೇಶ್ ಬೇಸರ

Jaggesh slams critics on Pan India film comment
ಬೆಂಗಳೂರು , ಗುರುವಾರ, 26 ನವೆಂಬರ್ 2020 (10:11 IST)
ಬೆಂಗಳೂರು: ಮೊನ್ನೆಯಷ್ಟೇ ನವರಸನಾಯಕ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ವಿರುದ್ಧ ಕಿಡಿ ಕಾರಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅವರ ಬಗ್ಗೆ ಕೆಟ್ಟದಾಗಿ ಬರೆದಿದ್ದಾರೆ. ಇದರ ಬಗ್ಗೆ ನೊಂದು ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.


ನಿಜವಾಗಿಯೂ ಶಾಕ್ ಆದೆ. ಕನ್ನಡದಲ್ಲಿ ಬೆಳೆಯುತ್ತಿರುವ ಯುವ ನಟ-ನಟಿಯರಿಗಾಗಿ ಆಡಿದ ಮಾತಿಗೆ ನನಗೆ ಈ ಅಪವಾದವೇ? ಪರವಾಗಿಲ್ಲ, ಮಕ್ಕಳು ಎಷ್ಟೇ ಬೆಳೆದರು ತಂದೆಯ ಎದುರು ಮಕ್ಕಳೇ ವಿನಃ ತಂದೆಯಾಗಲ್ಲ. ದರ್ಶನ್, ಶಿವಣ್ಣ, ಗಣೇಶ್, ಪುನೀತ, ವಿಜಿ ಪ್ಯಾನ್ ಇಂಡಿಯಾ ಸಿನಿಮಾ ನಂಬದೇ ಕನ್ನಡಿಗ ತಂತ್ರಜ್ಞರನ್ನೇ ಬೆಳೆಸಿ ಕನ್ನಡದ ಸೀಮೆಯಲ್ಲೇ ಬೆಳೆದು ಬಂದವರು. ನಮಗೆ ನೂರು ಶೇಕಡಾ ಕನ್ನಡ ಜನರೇ ಸಾಕು ಎಂದು ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಂಡೋ ಸೀಟ್ ಗಾಗಿ ವಿಜಯ್ ಪ್ರಕಾಶ್-ಅರ್ಜುನ್ ಜನ್ಯಾ ಹಾಡು