Select Your Language

Notifications

webdunia
webdunia
webdunia
webdunia

ಇಯರ್‌ಫೋನ್ ಧರಿಸಿ ರೈಲು ಹಳಿ ದಾಟುತ್ತಿದ್ದ ಬಾಲಕ ರೈಲು ಡಿಕ್ಕಿ ಹೊಡೆದು ಸಾವು

ಬಲ್ಲಿಯಾ ರೈಲು ಘಟನೆ

Sampriya

ಬಲ್ಲಿಯಾ , ಶನಿವಾರ, 2 ಆಗಸ್ಟ್ 2025 (15:07 IST)
ಬಲ್ಲಿಯಾ (ಯುಪಿ):  16 ವರ್ಷದ ಬಾಲಕನೊಬ್ಬ ಇಯರ್‌ ಫೋನ್‌ಗಳನ್ನು ಹಾಕಿಕೊಂಡು ರೈಲು ಹಳಿಗಳನ್ನು ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶನಿವಾರ ವರದಿಯಾಗಿದೆ. 

ಶುಕ್ರವಾರ ಸಂಜೆ ಉದೈನಾ ಗ್ರಾಮದ ಬಲ್ಲಿಯಾ ಮೌ ರೈಲ್ವೆ ವಿಭಾಗದಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಅರವಿಂದ್ ರಾಜ್‌ಭರ್ ಎಂದು ಗುರುತಿಸಲಾಗಿದೆ. ಇಯರ್‌ಫೋನ್‌ ಬಳಸಿ ಹಾಡನ್ನು  ಕೇಳುತ್ತಾ ಹಳಿಗಳನ್ನು ದಾಟುತ್ತಿದ್ದರು. ಅವರು ಬಲ್ಲಿಯಾ ಕಡೆಗೆ ಹೋಗುತ್ತಿದ್ದ ತಪತಿ ಗಂಗಾ ಎಕ್ಸ್‌ಪ್ರೆಸ್‌ನಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಘಟನೆಯ ನಂತರ ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್ ನಲ್ಲಿ ಕಣ್ಣೀರಿಡುತ್ತಾ ಪ್ರಜ್ವಲ್ ರೇವಣ್ಣ ಹೇಳಿದ್ದೇನು, ಸಂಪೂರ್ಣ ವಿವರ ಇಲ್ಲಿದೆ