Daily Horoscope

Select Your Language

Notifications

webdunia
webdunia
webdunia
webdunia

60 ವರ್ಷದ ವೃದ್ದೆಯನ್ನು ಪ್ರೀತಿಸಿ ಮದುವೆಯಾದ 20 ವರ್ಷದ ಯುವಕ

ಉತ್ತರ ಪ್ರದೇಶ
ಲಕ್ನೋ : 20 ವರ್ಷದ ಯುವಕನೊಬ್ಬ 60 ವರ್ಷದ ವೃದ್ದೆಯನ್ನು ಪ್ರೀತಿಸಿ ಮದುವೆಯಾದ ಘಟನೆ  ಉತ್ತರ ಪ್ರದೇಶದ ಮಹೋರಾಬಾದ್ ನಲ್ಲಿ ನಡೆದಿದೆ.


2 ವರ್ಷಗಳ ಹಿಂದೆ ಮಿಸ್ಡ್ ಕಾಲ್ ನಿಂದ ಇವರಿಬ್ಬರ ನಡುವೆ ಪರಿಚಯವಾಗಿ, ಬಳಿಕ ಮೊಬೈಲ್ ನಲ್ಲಿ ಮಾತನಾಡುತ್ತಾ ಇವರ ನಡುವೆ ಪ್ರೀತಿ ಶುರುವಾಗಿದೆ. ತನ್ನ ಪತಿ ನಿಧನರಾಗಿದ್ದ ಕಾರಣ  ವೃದ್ದೆ ಯುವಕನ ಬಳಿ ತನ್ನನ್ನು ಮದುವೆಯಾಗಿ ತನ್ನ ಊರಲ್ಲೇ ಇರುವಂತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪಿದ ಆತ ವೃದ್ದೆಯ ಮನೆಗೆ ಬಂದು ಆಕೆಯನ್ನು ಮದುವೆಯಾಗಿದ್ದಾನೆ.


ಆದರೆ ವೃದ್ದೆಯ ಮಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಈ ವಿಚಾರ  ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ಸಮಾಧಾನಪಡಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇದನ್ನು ಬಳಸಲು ಇಷ್ಟವಿಲ್ಲದೇ ವೇಶ್ಯೆಯನ್ನೇ ಕೊಂದ