Select Your Language

Notifications

webdunia
webdunia
webdunia
webdunia

ತನ್ನ ತಂದೆ ಜತೆ ಮಲಗುವಂತೆ ಪತ್ನಿಗೆ ಒತ್ತಾಯಿಸಿದ ನೀಚ ಪತಿ

ತನ್ನ ತಂದೆ ಜತೆ ಮಲಗುವಂತೆ ಪತ್ನಿಗೆ ಒತ್ತಾಯಿಸಿದ ನೀಚ ಪತಿ
ಕೊಪ್ಪಳ , ಗುರುವಾರ, 23 ಜನವರಿ 2020 (11:31 IST)
ಕೊಪ್ಪಳ : ತನ್ನ ತಂದೆ ಜತೆ ಮಲಗುವಂತೆ ಪತಿಯೇ ಪತ್ನಿಗೆ ಕಿರುಕುಳ ನೀಡುತ್ತಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕಳಮಳ್ಳಿ ತಾಂಡಾದ ಗೋಕುಲ್ ಇಂತಹ ನೀಚ ಕೃತ್ಯಕ್ಕೆ ಮುಂದಾದ ಪತಿ. ಈತ ತನ್ನ ಮೊದಲ ಮದುವೆ ವಿಚಾರವನ್ನು ಮುಚ್ಚಿಟ್ಟು 2016ರಲ್ಲಿ ಮತ್ತೊಂದು ವಿವಾಹವಾಗಿದ್ದ. ಮದುವೆಯಾದ ಬಳಿಕ ಪತ್ನಿಗೆ ಕಿರುಕುಳ ನೀಡಿದ್ದಲ್ಲದೇ ಜೊತೆಗೆ ತನ್ನ ತಂದೆ ಜತೆ ಮಲಗುವಂತೆ ಒತ್ತಾಯ ಮಾಡುತ್ತಿದ್ದ.

ಪತಿಯ ವರ್ತನೆಯಿಂದ ಮನನೊಂದ ಮಹಿಳೆ ತಾವರಗೇರಾ ಠಾಣಾ ಪೊಲೀಸರು ದೂರು ನೀಡಲು ಹೋದರೆ ದೂರು ಸ್ವೀಕರಿಸದ ಹಿನ್ನಲೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾಳೆ. ಪತಿ ಹಾಗೂ ತಾವರಗೇರಾ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ  ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮೌಢ್ಯ ನಿಷೇಧ ಕಾಯ್ದೆ ಜಾರಿ ಹಿನ್ನಲೆ; ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಟಾಂಗ್