Daily Horoscope
✕

ದೇವೇಗೌಡರ ಜತೆಗಿರೋ ದೈವ ಶಕ್ತಿ ಯಾವುದು?

Webdunia
ಶನಿವಾರ, 20 ಏಪ್ರಿಲ್ 2019 (16:38 IST)
ನನ್ನೊಂದಿಗೆ ದೈವ ಶಕ್ತಿ ಇದೆ. ಪ್ರಧಾನಿ ನರೇಂದ್ರ ಮೋದಿ ತನ್ನ ಸ್ಥಾನದ ಗೌರವ ಬಿಟ್ಟು ಮಾತಾಡುತ್ತಾರೆ ಅಂತ ಜೆಡಿಎಸ್ ವರಿಷ್ಠ ಹೇಳಿದ್ದಾರೆ.

ನಾನೊಬ್ಬನೇ ಸ್ಟ್ರಾಂಗ್ ಅನ್ನೋ ಥರ ಮೋದಿ ಮಾತಾಡ್ತಾರೆ. ಸುಮ್ಮನೆ ಬಂಬಡಾ ಹೊಡೆಯೋದರಲ್ಲಿ ಅರ್ಥ ಇಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಹೆಚ್.ಡಿ.ದೇವೇಗೌಡರು ವಿಜಯಪುರದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ನನ್ನ ಅವಧಿಯಲ್ಲಿ‌ ಇದಕ್ಕಿಂತಲೂ ಸುಭದ್ರ ಆಡಳಿತ ನೀಡಿದ್ದೆ. ಇತಿಹಾಸ ತಿರುಚಲು ಆಗಲ್ಲ. ಬಹುಮತ ಇದ್ದಾಗ್ಯೂ ಮೋದಿ ಸರಿಯಾದ ಆಡಳಿತ ನೀಡಲಿಲ್ಲ ಎಂದರು.

ಇನ್ನು ಜೆಡಿಎಸ್ ಎಂದೂ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿಲ್ಲ. ಇದೊಂದು ಕುತಂತ್ರ. ಉತ್ತರ ಕರ್ನಾಟಕದಲ್ಲಿ ದೇವೇಗೌಡಾ ಬೆಳಯಬಾರದೆಂಬ  ಕಾರಣಕ್ಕೆ ಹೆಣೆದ ಕುತಂತ್ರ ಅಷ್ಟೆ. ನನ್ನನ್ನು ವಿರೋಧ‌ ಮಾಡಿದವರು ಎಲ್ಲರೂ ಸ್ವರ್ಗದಲ್ಲಿದ್ದಾರೆ. ನಾನಿನ್ನೂ ಜೀವಂತ‌ ಇದ್ದೇನೆ. ನನ್ನೊಂದಿಗೆ ದೈವ ಶಕ್ತಿ ಇದೆ ಎಂದು ವ್ಯಂಗ್ಯವಾಡಿದರು.

ಇ‌ನ್ನು ಮಾಯಾವತಿ, ಮಮತಾ ಬ್ಯಾನರ್ಜಿ, ಶರದ ಪವಾರ, ಚಂದ್ರಬಾಬು ನಾಯ್ಡು ಇನ್ನೂ ಅನೇಕರು ಪ್ರಧಾನಿಯಾಗುವ‌ ಅರ್ಹತೆ ಹೊಂದಿದ್ದಾರೆ. ನಾನು ಪ್ರಧಾನಿ ಆಕಾಂಕ್ಷಿ ಅಲ್ಲ. ಕಾಂಗ್ರೆಸ್ ಬೆಂಬಲವಿಲ್ಲದೇ ಪ್ರಧಾನಿ ಆಗಲು ಸಾಧ್ಯವಿಲ್ಲ. ನಾವು ಈಗಾಗಲೇ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿದ್ದೆವೆ ಎಂದರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಏರಿ ರಾಹುಲ್ ಗಾಂಧಿ ಸಾಹಸ: Video

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ:ಎನ್‌ಎಸ್‌ಯುಐ ಬೃಹತ್ ಪ್ರತಿಭಟನೆ

ಸರ್ಕಾರವೇ ಕಾನೂನು ಬಾಹಿರ ಕೆಲಸ ಮಾಡುತ್ತಿದೆ: ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್ ಸ್ಟೇಷನ್ ಆದ ಪೊಲೀಸ್ ಠಾಣೆಗಳು: ಆರ್.ಅಶೋಕ್

ಕಾನ್ಪುರ ಹೆದ್ದಾರಿಯಲ್ಲಿ ಉಲ್ಟಾ ಆಯ್ತು ಎಣ್ಣೆ ಟ್ಯಾಂಕರ್: ಎಣ್ಣೆಗೆ ಮಗಿಬಿದ್ದ ಜನ Video

ಮುಂದಿನ ಸುದ್ದಿ
Show comments