Webdunia - Bharat's app for daily news and videos

Install App

ಸಿಎಂ, ಸಿದ್ದು ಪಾಕಿಸ್ತಾನದ ಏಜೆಂಟರಾ?

Webdunia
ಶನಿವಾರ, 20 ಏಪ್ರಿಲ್ 2019 (16:26 IST)
ರಾಹುಲ್ ಗಾಂಧಿ, ಹೆಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ ಸೋಲಿನ ಭೀತಿಯಿಂದ ಪಾಕಿಸ್ತಾನದ ಏಜೆಂಟ್ ಗಳಂತೆ ವರ್ತಿಸುತ್ತಿದ್ದಾರೆ. ಹೀಗಂತ ಬಿಜೆಪಿ ಮುಖಂಡ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಹೇಳ್ತಾರೆ ಮೋದಿಗಿಂತ ನಾನು ವಯಸ್ಸಲ್ಲಿ ದೊಡ್ಡೋರು ಅಂತಾರೆ. ಸಿದ್ದರಾಮಯ್ಯ ದುರಹಾಂಕಾರದಿಂದ ಹೇಳ್ತಾರೆ, ನಾನು ಇದ್ದರೆ ಕಾಂಗ್ರೆಸ್ ಅಂತಾರೆ. ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತಕ್ಕ ಉತ್ತರ ಜನರು ಕಲಿಸುತ್ತಾರೆ. ಹೀಗಂತ ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಚುನಾವಣೆ ನಂತರ ಸರ್ಕಾರದಲ್ಲಿ ಭಾರಿ ಬದಲಾವಣೆಯಾಗುತ್ತೆ. ಸಿಎಂ ಗೆ ಮಂಡ್ಯ ಮಾತ್ರ ಗೆಲ್ಲಬೇಕು, ಮಂಡ್ಯ ಗೆದ್ದರೆ ರಾಜ್ಯ ಗೆದ್ದಂತೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ರಬ್ಬರ್ ಸ್ಟ್ಯಾಂಪ್ ಎಂದ ರಾಮುಲು, ಡಿಕೆಶಿ ಗೆ ಸಿದ್ದರಾಮಯ್ಯ ಗೆ ಅಧಿಕಾರದ ವ್ಯಮೋಹ ಜಾಸ್ತಿ ಆಗಿದೆ. ಅವರು ಕುರ್ಚಿಗಳಿಗೆ ಅಂಟಿಕೊಂಡಿದ್ದಾರೆ, ಅದನ್ನು ಬಿಟ್ಟು ಇರೋಕಾಗಲ್ಲ. ಸಿಎಂ ಇನ್ಮುಂದೆ ರಾಜ್ಯದಲ್ಲಿ ತಿರುಗಾಡಿದ್ರೆ ಕಲ್ಲು ತಗೊಂಡು ಹೋಡಿತಾರೆ ಎಂದ್ರು.

ಸಿಎಂ ಗೆ ಸ್ವಲ್ಪವೂ ಕಾಮನ್ ಸೆನ್ಸ್ ಇಲ್ಲ, ರಾಮುಲುನ್ನು ಏನು ಮಾಡಿಕೊಳ್ಳೋಕೆ ಆಗಲ್ಲ, ರಾಮುಲು ದೊಡ್ಡ ಶಕ್ತಿ ಎಂದರು.
ಸಿಎಂ ವಿರುದ್ಧ ಏಕವಚನದಲ್ಲಿ ರಾಮುಲು ಕಿಡಿಕಾರಿದ್ರು. ನಿನ್ನೆ ಸಿಎಂ ರಾಮುಲು ಗಣಿ ಕಳ್ಳ ಎಂದಿದ್ದಕ್ಕೆ ಕಿಡಿಕಾರಿದ್ದು, ಪುತ್ರನನ್ನ ಗೆಲ್ಲಿಸೋದ್ರಲ್ಲಿ ಸಿಎಂ ಹತಾಶನಾಗಿದ್ದಾನೆ. ಆತ ಲಾಟ್ರಿಯಲ್ಲಿ ಸಿಎಂ ಆದವ ಎಂದು ಜರಿದರು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments