Select Your Language

Notifications

webdunia
webdunia
webdunia
webdunia

ಡಿಬಾಸ್ ಕೈದಿ ನಂ.6106ನ್ನು ವಾಹನಕ್ಕೆ ರಿಜಿಸ್ಟರ್ ಮಾಡಲು ಮುಂದಾದ ದರ್ಶನ್ ಅಭಿಮಾನಿ

Actor Darshan Arrest

Sampriya

ಮೈಸೂರು , ಸೋಮವಾರ, 24 ಜೂನ್ 2024 (17:12 IST)
ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರುವುದನ್ನು ಅವರ ಅಭಿಮಾನಿಗಳಿಗೆ ಸಹಿಸಕ್ಕೆ ಆಗುತ್ತಿಲ್ಲ.

ಇನ್ನೂ ತಮ್ಮ ನೆಚ್ಚಿನ ನಟ ಬೇಗ ಜೈಲಿಂದ್ದ ಹೊರಬರಲಿ ಎಂದು ಕೆಲವರು ದೇವರ ಮೊರೆ ಹೋಗುತ್ತಿದ್ದಾರೆ. ಅದಲ್ಲದೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಡಿಬಾಸ್ ಪರ ಜೈಕಾರ ಕೂಗಿ ಬೆಂಬಲ ಸೂಚಿಸುತ್ತಿದ್ದಾರೆ.

ಇದೀಗ ಇಲ್ಲೊಬ್ಬ ಅಭಿಮಾನಿ ದರ್ಶನ್‍ಗೆ ಜೈಲಿನಲ್ಲಿ ನೀಡಿರುವ 6106 ನಂಬರ್‌ ಅನ್ನು ತನ್ನ ಲಕ್ಕಿ ನಂಬರ್ ಎಂದು ಹೇಳಿದ್ದಾನೆ. ಅದಲ್ಲದೆ ಈ ನಂಬರ್‌ ಅನ್ನು ತನ್ನ ವಾಹನಕ್ಕೂ ಅಳವಡಿಸಲು ಮುಂದಾಗಿದ್ದಾನೆ.

ಬನ್ನೂರಿನ ಅಭಿಮಾನಿಯಾಗಿರುವ ಧನುಷ್ ಎಂಬತ ಇದೀಗ ತನ್ನ ವಾಹನಕ್ಕೆ ಈ ನಂಬರ್‌ ಅನ್ನು ರಿಜಿಸ್ಟರ್ ಮಾಡಲು ಮುಂದಾಗಿದ್ದಾನೆ. ಇನ್ನೂ ಧನುಷ್ ಅವರು ನಟ ದರ್ಶನ್ ಜೈಲು ಪಾಲಾಗಿರುವುದನ್ನು ನೆನೆಸಿಕೊಂಡು ಭಾವುಕರಾದರು. ಶೀಘ್ರ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುವುದಾಗಿ ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಹೊತ್ತಿದ್ದಾನೆ ಎಂದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್ ಆದೇಶ ಬರುವವರೆಗೆ ಕಾಯಿರಿ: ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಸಲಹೆ