ಕಲಬುರಗಿ ಜಿಲ್ಲೆಯ ಚಿತ್ತಾಪುರ ಬಿಜೆಪಿ ಪಾಳೆಯದಲ್ಲಿ ಭಿನ್ನಮತ ಸ್ಪೋಟಗೊಂಡಿದೆ.. ಮಣಿಕಂಠ್ ರಾಠೋಡ್‌ಗೆ ಚಿತ್ತಾಪುರ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ, ವಂಚಿತ ಅಭ್ಯರ್ಥಿಗಳು ಬಂಡಾಯದ ಎಚ್ಚರಿಕೆ ನೀಡಿದ್ದಾರೆ.. ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.. ಮಣಿಕಂಠ್ ರಾಠೋಡ್‌ಗೆ ಯಾವ ಆಧಾರದ ಮೇಲೆ ಬಿಜೆಪಿ ಟಿಕೆಟ್ ನೀಡಲಾಗಿದೆ ಅನ್ನೊದು ತಿಳಿತಿಲ್ಲ, ಅರವಿಂದ್ ಚೌವ್ಹಾಣ್‌ರನ್ನ ಅಭ್ಯರ್ಥಿಯನ್ನಾಗಿ ಮಾಡ್ತೇವೆ ಅಂತಾ ರಾಜ್ಯ-ರಾಷ್ಟ್ರ ನಾಯಕರು ಹೇಳಿದ್ದರು.. ಅರವಿಂದ ಚೌವ್ಹಾಣ್ ಎಜುಕೇಟೆಡ್, ಡೀಸೆಂಟ್ ಇದ್ದಾರೆ.. ಜನರ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ, ದೆಹಲಿ ಮಟ್ಟದಲ್ಲೂ ಕೊನೆ ಗಳಿಗೆವರೆಗೆ ಅರವಿಂದ ಚೌವ್ಹಾಣ್‌ರಿಗೆ ಟಿಕೆಟ್ ಸಿಗುತ್ತೆ ಅಂತಾ ಹೇಳಿದ್ದರು.. ಆದರೆ ಅರವಿಂದ್‌ಗೆ ಟಿಕೆಟ್ ಕೈತಪ್ಪಿದೆ, ಚಿತ್ತಾಪುರ ಕ್ಷೇತ್ರದಲ್ಲಿ ಅರವಿಂದ್‌ಗೆ ಆದ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದ್ದೇವೆ.. ನಾಳೆ ಅಥವಾ ನಾಡಿದ್ದು ಮುಂದಿನ ನಡೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.