Publish Date: Fri, 14 Apr 2023 (16:50 IST)
Updated Date: Fri, 14 Apr 2023 (16:08 IST)
ಬೆಂಗಳೂರಿನ ಮಹದೇವಪುರ ಬಿಜೆಪಿ ಟಿಕೆಟ್ ಯಾರ ಪಾಲಾಗುತ್ತೆ ಎಂಬ ಚರ್ಚೆ ಜೋರಾಗಿದೆ. ಮಹದೇವಪುರ ಹಾಲಿ ಶಾಸಕ ಅರವಿಂದ್ ಲಿಂಬಾವಳಿಗೆ ಟಿಕೆಟ್ ಕೈ ತಪ್ಪಲಿದ್ದು, ನಿವೃತ್ತ ಐಎಎಸ್ ಅಧಿಕಾರಿ ಶಿವರಾಂಗೆ ಜಾಕ್ ಪಾಟ್ ಹೊಡೆಯಲಿದ್ಯಾ ಎಂಬ ಚರ್ಚೆ ಜೋರಾಗಿದೆ. ಮೊದಲ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿಗೆ ಮಹದೇವಪುರ ಟಿಕೆಟ್ ಮಿಸ್ ಆಗಿದ್ದು, ಮೂರನೇ ಪಟ್ಟಿಯಲ್ಲಾದ್ರೂ ಲಿಂಬಾವಳಿಗೆ ಲಕ್ ಒಲಿಯುತ್ತಾ ಅಥವಾ ಶಿವರಾಂಗೆ ಬಿಜೆಪಿ ಮಣೆ ಹಾಕುತ್ತಾ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಮೀಸಲು ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ, ಕೆ. ಶಿವರಾಂ, ಡಾ. ಸಂದೀಪ್ ನಡುವೆ ಟಿಕೆಟ್ಗಾಗಿ ತೀವ್ರ ಫೈಟ್ ಇದೆ. ಲಿಂಬಾವಳಿಗೆ ಟಿಕೆಟ್ ಕೈತಪ್ಪಿದ್ರೆ ಎಂಪಿ ಟಿಕೆಟ್ ನೀಡೋ ಸಾಧ್ಯತೆಯಿದೆ.