Select Your Language

Notifications

webdunia
webdunia
webdunia
webdunia

ನಾಯಕನ ಆರಾಧನೆ ಬಗ್ಗೆ ಅಂಬೇಡ್ಕರ್‌ ಎಚ್ಚರಿಸಿದ್ರು

ನಾಯಕನ ಆರಾಧನೆ ಬಗ್ಗೆ ಅಂಬೇಡ್ಕರ್‌ ಎಚ್ಚರಿಸಿದ್ರು
bangalore , ಶುಕ್ರವಾರ, 14 ಏಪ್ರಿಲ್ 2023 (16:30 IST)
ಬಲವಂತದಿಂದ ಜನರ ಬಾಯಿ ಮುಚ್ಚಿಸುವುದು ಮತ್ತು ರಾಷ್ಟ್ರ ವಿರೋಧಿ ಎಂದು ಒಬ್ಬರನ್ನು ಬ್ರಾಂಡ್ ಮಾಡುವುದು ಅಪಾಯಕಾರಿಯಾದ ಬೆಳವಣಿಗೆಯಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಪ್ರವೃತ್ತಿ ನಮ್ಮ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಿ ಸಂವಿಧಾನವನ್ನು ನಾಶಗೊಳಿಸುತ್ತದೆ. ನಾಯಕನ ಆರಾಧನೆ ಮತ್ತು ಭಕ್ತಿಯ ದುಷ್ಟರಿಣಾಮಗಳ ಕುರಿತು ಅಂಬೇಡ್ಕರ್ ಆಗಲೇ ಎಚ್ಚರಿಸಿದ್ದರು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವದ ಕುರಿತು ಟ್ವೀಟರ್‌ನಲ್ಲಿ ಖರ್ಗೆ ವಿಡಿಯೊ ಸಂದೇಶ ನೀಡಿದ್ದಾರೆ. ಈ ವೇಳೆ ಆಡಳಿತ ಪಕ್ಷದ ನಡೆಯನ್ನು ತೀಕ್ಷ್ಮವಾಗಿ ಖಂಡಿಸಿದ್ದಾರೆ. ಸಂಸತ್ತನ್ನು ಚರ್ಚೆಗಿಂತ ಹೋರಾಟದ ಅಖಾಡವಾಗಿ ಆಡಳಿತ ಪಕ್ಷ ಬದಲಾಯಿಸಿದೆ ಎಂದು ಅಸಮಾಧಾನ ಹೊರಹಾಕಿದರು. ‘ಧರ್ಮದ ಪ್ರಕಾರ ಭಕ್ತಿ ಮೋಕ್ಷದ ದಾರಿಯಾಗಿದೆ. ಆದರೆ, ರಾಜಕೀಯದಲ್ಲಿ ಭಕ್ತಿ ಅಥವಾ ನಾಯಕನ ಆರಾಧನೆ ದೇಶದ ಅವನತಿಗೆ ದಾರಿಯಾಗಲಿದೆ. ಅಂತಿಮವಾಗಿ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ಅಂಬೇಡ್ಕರ್‌ ಹೇಳಿದ ಮಾತನ್ನು ಖರ್ಗೆ ಪುನರುಚ್ಛರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ವರುಣಾದಲ್ಲಿ ಪ್ರಚಾರ’