Publish Date: Fri, 14 Apr 2023 (15:29 IST)
Updated Date: Fri, 14 Apr 2023 (15:31 IST)
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಚಾರಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ.. ಬೆಳಗಾವಿಯಲ್ಲಿ ಮಾತನಾಡಿದ ಅವರು, ಲಕ್ಷ್ಮಣ ಸವದಿ ಇಂದು ನಾಯಕರ ಜೊತೆ ಚರ್ಚೆ ಮಾಡ್ತಾರೆ, ಆಮೇಲೆ ಪಕ್ಷ ಸೇರ್ಪಡೆಯ ಬಗ್ಗೆ ತೀರ್ಮಾನ ಆಗುತ್ತೆ ಎಂದಿದ್ದಾರೆ.. ಅವರು ಬರೋದ್ರಿಂದ ಪಕ್ಷಕ್ಕೆ ಬಹಳಷ್ಟು ಅನುಕೂಲ ಆಗಲಿದೆ.. ಅವರು ಹಿರಿಯರು, ಅನುಭವಿಗಳಾಗಿದ್ದು, ಡಿಸಿಎಂ ಸ್ಥಾನದವರೆಗೂ ಹೋಗಿ ಬಂದಿದ್ದಾರೆ.. ಅವರು ಪಕ್ಷಕ್ಕೆ ಬರೋದ್ರಿಂದ ನಮ್ಮ ಪಕ್ಷಕ್ಕೆ ಸೀಟುಗಳು ಜಾಸ್ತಿ ಬರೋದಕ್ಕೆ ಸಹಾಯ ಆಗುತ್ತೆ ಎಂದು ತಿಳಿಸಿದ್ರು. ಉತ್ತರ ಕರ್ನಾಟಕದಲ್ಲಿ ಒಂದು ಇಂಪ್ಯಾಕ್ಟ್ ಮಾತ್ರ ಖಂಡಿತ ಆಗುತ್ತೆ ಎಂದಿದ್ದಾರೆ.. ಇನ್ನು ಸವದಿ ಜತೆಗೆ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಪ್ರಯಾಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವನಿಗೆ ಹೈಕಮಾಂಡ್ ಜವಾಬ್ದಾರಿ ನೀಡಿದೆ, ಹೈಕಮಾಂಡ್ ಜವಾಬ್ದಾರಿಯನ್ನು ಅವನು ನಿಭಾಯಿಸುತ್ತಿದ್ದಾನೆ ಎಂದಿದ್ದಾರೆ