Select Your Language

Notifications

webdunia
webdunia
webdunia
webdunia

ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡ್ತಾರೆ : ಸಿ.ಟಿ ರವಿ

ಬಿಜೆಪಿ
ಚಿಕ್ಕಮಗಳೂರು : ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ಬಿಜೆಪಿಯಲ್ಲಿ ಯಾರೂ ಸಿ.ಟಿ.ರವಿಯನ್ನು ನೆಚ್ಚಿಕೊಂಡಿಲ್ಲ, ಬಿಜೆಪಿ ಸಿದ್ಧಾಂತವನ್ನು ನೆಚ್ಚಿಕೊಂಡಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಿಡಿಕಾರಿದರು.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಂದೆ ಬಿಜೆಪಿ ಎಂ.ಪಿ ಕುಮಾರಸ್ವಾಮಿ ಅವರಿಗೆ 5 ಬಾರಿ ಟಿಕೆಟ್ ನೀಡಿದೆ. ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗುವುದರಿಂದ ಈ ರೀತಿ ಹೇಳುತ್ತಾರೆ. ಪಾರ್ಟಿ ಟಿಕೆಟ್ ವಿಥ್ ಡ್ರಾ ಮಾಡುವುದು ಮಾತ್ರ ಕೆಲಸವಲ್ಲ, ಪಾರ್ಟಿ ತುಂಬಬೇಕು ಎಂದರು.

ಕುಮಾರಸ್ವಾಮಿ, ಜೀವರಾಜ್, ನನ್ನನ್ನು ಸೈದ್ಧಾಂತಿಕ ಬದ್ಧತೆ ಕಾರಣಕ್ಕೆ ಗೆಲ್ಲಿಸಿದರು. ಮೂಡಿಗೆರೆಯಲ್ಲಿ ಬಿಜೆಪಿ ಬಲವಾಗಿದೆ ಗೆಲ್ಲಿಸುತ್ತೇವೆ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ನಿನ್ನೆ ನನ್ನ ಮನೆಗೆ ಬಂದು ಹೊಗಳಿ ಹೋಗಿದ್ದರು. ಈಗ ಹೀಗೆ ಮಾತನಾಡ್ತಾರೆ. ನಾಳೆ ಏನ್ ಮಾತನಾಡ್ತಾರೆ ನೋಡೋಣ ಎಂದು ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕರ್ನಾಟಕ ಭಾಗದಲ್ಲಿ 30ರಿಂದ 40 ಸ್ಥಾನ ನಿಶ್ಚಿತ : ಕುಮಾರಸ್ವಾಮಿ