Publish Date: Fri, 14 Apr 2023 (17:30 IST)
Updated Date: Fri, 14 Apr 2023 (16:14 IST)
ಮಾಜಿ ಸಚಿವ K.S ಈಶ್ವರಪ್ಪ ಕೊಲೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ.. ಈಶ್ವರಪ್ಪ ಕೊಲೆಗೆ ಒಂದು ತಿಂಗಳಿನಿಂದ ಸಂಚು ನಡೆಸಲಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಚುನಾವಣಾ ಸಂದರ್ಭದಲ್ಲೇ ಹತ್ಯೆ ಮಾಡುವ ಸಂಚು ರೂಪಿಸಲಾಗಿದ್ದು, PFI ಸಂಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ... ಈಶ್ವರಪ್ಪ ಅಲ್ಲಾಹ್ ಹಾಗೂ ಆಜಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು PFI ಮುಂದಾಗಿತ್ತಾ ಎಂಬ ಅನುಮಾನ ಮೂಡಿದೆ.. ನಾಗ್ಪುರದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು PFI ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ತನಿಖೆ ನಡೆಸುವಾಗ ಈಶ್ವರಪ್ಪ ಹತ್ಯೆ ಸ್ಕೆಚು ಬಹಿರಂಗವಾಗಿದೆ.