Select Your Language

Notifications

webdunia
webdunia
webdunia
webdunia

ನಾನು ದೇಶಭಕ್ತ ಅದಕ್ಕೇ ಸೂಸೈಡ್ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗ್ತೀನಿ ಎಂದೆ: ಜಮೀರ್ ಅಹ್ಮದ್

Zameer Ahmed Khan

Krishnaveni K

ಬೆಂಗಳೂರು , ಮಂಗಳವಾರ, 6 ಮೇ 2025 (16:16 IST)
ಬೆಂಗಳೂರು: ನಾನು ದೇಶಭಕ್ತ ಅದಕ್ಕೇ ಸೂಸೈಡ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಯುದ್ಧ ಮಾಡಲು ಹೋಗ್ತೀನಿ ಎಂದಿದ್ದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಮೊನ್ನೆಯಷ್ಟೇ ಸಚಿವ ಜಮೀರ್ ಅಹ್ಮದ್ ನಾನು ಸೂಸೈಡ್ ಬಾಂಬರ್ ಆಗಿ ಪಾಕಿಸ್ತಾನಕ್ಕೆ ಹೋಗಿ ಯದ್ಧ ಮಾಡಲೂ ಸಿದ್ಧ ಎಂದಿದ್ದರು. ಇದನ್ನಿಟ್ಟುಕೊಂಡು ವಿಪಕ್ಷ ಬಿಜೆಪಿ ನಾಯಕರು ಜಮೀರ್ ಅಹ್ಮದ್ ರನ್ನು ಲೇವಡಿ ಮಾಡಿದ್ದರು.

ಇದೀಗ ಮಾಧ್ಯಮಗಳ ಮುಂದೆ ಮತ್ತೊಮ್ಮೆ ಜಮೀರ್ ಅದೇ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ವಿರುದ್ಧ ಕೇಂದ್ರ ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲವಿದೆ. ನಮ್ಮ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರೂ ಇದನ್ನೇ ಹೇಳಿದ್ದಾರೆ.

ನಾನು ದೇಶಭಕ್ತ. ದೇಶಕ್ಕಾಗಿ ಸೂಸೈಡ್ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗಲೂ ಸಿದ್ಧ ಎಂದು ಮತ್ತೊಮ್ಮೆ ಹೇಳುತ್ತೇನೆ. ನಮ್ಮ ದೇಶ ನಮಗೆ ಮುಖ್ಯ. ಅದಕ್ಕೇ ಯುದ್ಧಕ್ಕೆ ಹೋಗಲು ಸಿದ್ಧ ಎಂದಿದ್ದೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ನಿಶ್ಚಿತಾರ್ಥ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಅಪಘಾತ: ವಧು ಸೇರಿದಂತೆ ಐವರು ಸಾವು