Publish Date: Sat, 11 Jul 2026 (11:40 IST)
Updated Date: Sat, 11 Jul 2026 (11:42 IST)
ಮೈಸೂರು: ಈ ಬಾರಿ ದಸರಾದಲ್ಲಿ ಕಂಬಳ ಆಯೋಜಿಸುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿರುವುದಕ್ಕೆ ರಾಜವಂಶಸ್ಥ, ಮೈಸೂರು ಸಂಸದ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾದಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಕರಾವಳಿ ಭಾಗದ ಗ್ರಾಮೀಣ ಕ್ರೀಡೆ ಕಂಬಳ ಆಯೋಜಿಸುವುದಕ್ಕೆ ಸಿಎಂ ಡಿಕೆ ಶಿವಕುಮಾರ್ ಅನುಮತಿ ನೀಡಿದ್ದರು. ಇದಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಗೆ ಜವಾಬ್ಧಾರಿ ವಹಿಸಿದ್ದರು.
ಆದರೆ ಕರಾವಳಿ ಭಾಗದ ಕ್ರೀಡೆಯನ್ನು ಮೈಸೂರು ದಸರಾದಲ್ಲಿ ಅಳವಡಿಸುತ್ತಿರುವುದಕ್ಕೆ ಯದುವೀರ್ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ. ಮೈಸೂರು ದಸರಾ ಸಂದರ್ಭದಲ್ಲಿಯೇ ಕಂಬಳ ಯಾಕೆ? ಇದಕ್ಕೂ ಮೈಸೂರು ದಸರಾಗೂ ಸಂಬಂಧವಿಲ್ಲ. ಕಂಬಳ ಆಯೋಜಿಸುವುದಕ್ಕೆ ಮೈಸೂರು ಜನರ ವಿರೋಧವೂ ಇದೆ.
ಬೇರೆ ದಿನ ಬೇಕಾದರೆ ಮೈಸೂರಿನಲ್ಲಿ ಕಂಬಳ ಆಯೋಜಿಸಲಿ. ನಾವು ಮೈಸೂರಿನವರು ಎಲ್ಲಾ ರೀತಿಯ ಸಹಕಾರ ಕೊಟ್ಟು ಕಂಬಳ ಯಶಸ್ವಿಯಾಗಲು ಕೆಲಸ ಮಾಡುತ್ತೇವೆ. ಆದರೆ ದಸರಾ ಸಂದರ್ಭದಲ್ಲಿ ದಸರಾಗೆ ಸಂಬಂಧಪಡದ ಕಂಬಳ ಬೇಡ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ. ಇನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡಾ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ