Select Your Language

Notifications

webdunia
webdunia
webdunia
webdunia

ಮೈಸೂರು ದಸರಾದಲ್ಲಿ ಕಂಬಳ, ಎಷ್ಟು ಕೋಣಗಳು ಭಾಗವಹಿಸಲಿದೆ ಗೊತ್ತಾ

MLA Ashok Rai
Photo Courtesy X
ಮೈಸೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹಾಗೂ ತಂಡ ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸಲು ಸ್ಥಳ ನಿಗದಿಪಡಿಸಲು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಹಿನ್ನೆಲೆ ಇಂದು ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಹಾಗೂ ವಿಜಯನಗರದ ಐಶ್ವರ್ಯ ಪೆಟ್ರೋಲ್ ಪಂಪ್ ಬಳಿಯ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು,  ಅಕ್ಟೋಬರ್ 17 ಮತ್ತು 18ರಂದು ಕಂಬಳ ಆಯೋಜಿಸಲು ಯೋಚಿಸಲಾಗಿದೆ. ಸಾತಗಳ್ಳಿಯ ವಿಟಿಯು ಕಾಲೇಜು ಬಳಿಯ ಮೈದಾನದ ಜಾಗವನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ನಕ್ಷೆ ಸಮೇತ ವಿವರಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು. 

₹ 5- 8 ಕೋಟಿ ವೆಚ್ಚದಲ್ಲಿ ಕಂಬಳ ನಡೆಯುತ್ತಿದ್ದು, ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಇನ್ನೂ 8 ಸಾವಿರದ ಆಸನ ವ್ಯವಸ್ಥೆ ಮಾಡುತ್ತೇವೆ. ಕಂಬಳದೊಂದಿಗೆ ಕರಾವಳಿಯ ತಿನಿಸುಗಳ ಮಳಿಗೆಯೂ ಇರಲಿದೆ. ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕವಾಗಿ ಎರಡು ಬೋರ್‌ವೆಲ್ ತೆಗೆಸಲಿದ್ದೇವೆ. ಕುಡಿಯುವ ನೀರನ್ನು ಬಳಸುವುದಿಲ್ಲ. ಜನರಿಗೆ ತೊಂದರೆಯಾಗದಂತೆ ದಸರಾ ಪ್ರೇಕ್ಷಕರಿಗೆ ಕಂಬಳ ವೀಕ್ಷಣೆಗೆ ಸಹಾಯವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. 

ಇನ್ನೂ ಈ ಕಂಬಳದಲ್ಲಿ 150 ರಿಂದ 200 ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು ಮಡಿಕೇರಿಯಲ್ಲಿ ಕೋಣಗಳನ್ನು ಇಳಿಸಿ ಅವುಗಳಿಗೆ ಎರಡು ಗಂಟೆ ವಿಶ್ರಾಂತಿ ನೀಡಿದ ಬಳಿಕ ಮೈಸೂರಿಗೆ ಕಂಬಳದ ಹಿಂದಿನ ದಿನವೇ ಆಗಮಿಸಲಿದ್ದೇವೆ. ಆ ದಿನ ಅಭ್ಯಾಸ ನಡೆಸಿದ ಬಳಿಕ ಮರುದಿನ ಬೆಳಿಗ್ಗಿನಿಂದ ಎರಡು ದಿನ ಸ್ಪರ್ಧೆ ನಡೆಯಲಿದೆ. ಕಂಬಳಕ್ಕೆ 20 ಎಕರೆ ಜಾಗದ ಅವಶ್ಯಕತೆ ಇದೆ. 10 ಎಕರೆಯಲ್ಲಿ ವಾಹನ ನಿಲುಗಡೆಗೆ ಬೇಕಾಗುತ್ತವೆ’ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಡದಿ ಟೌನ್‌ಶಿಪ್‌, ಸಿಎಂಗಾಗಿ ಭೈರಮಂಗಲದಲ್ಲಿ ನಾಳೆ ಸಂಜೆ 4 ಗಂಟೆವರೆಗೂ ಕಾಯುತ್ತೇನೆ: ಎಚ್‌ ಡಿ ಕುಮಾರಸ್ವಾಮಿ